

ತುಮಕೂರು: ಹರಾಜಿನಲ್ಲಿ ನಂದಿಧ್ವಜ ಗೆದ್ದವರು ಶಾಸಕರಾಗುತ್ತಾರೆ ಎಂಬ ನಂಬಿಕೆ ಹಿನ್ನೆಲೆಯಲ್ಲಿ ಕುಣಿಗಲ್ನ ಮಾಜಿ ಹಾಗೂ ಹಾಲಿ ಶಾಸಕರ ನಡುವೆ ನಡೆದ ತೀವ್ರ ಪೈಪೋಟಿಯಲ್ಲಿ ಹಾಲಿ ಶಾಸಕ ಡಾ. ರಂಗನಾಥ್ ಅವರು ನಂದಿಧ್ವಜವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಕುಣಿಗಲ್ ತಾಲ್ಲೂಕಿನ ಕಗ್ಗೆರೆಯಲ್ಲಿರುವ ಸಿದ್ದಲಿಂಗೇಶ್ವರ ದೇವಸ್ಥಾನದಲ್ಲಿ ನಂದಿ ಧ್ವಜದ ಹರಾಜು ನಡೆಯಿತು. ಕಾಂಗ್ರೆಸ್ನ ಮಾಜಿ ಶಾಸಕ ರಾಮಸ್ವಾಮಿಗೌಡ ಹಾಗೂ ಹಾಲಿ ಶಾಸಕ ಡಾ.ರಂಗನಾಥ್ ನಡುವೆ ಧ್ವಜಕ್ಕಾಗಿ ಭಾರೀ ಪೈಪೋಟಿ ನಡೆಯಿತು.
ಈ ಹಿಂದೆ 5 ರಿಂದ 10 ಲಕ್ಷ ರೂ.ಗೆ ಮಾರಾಟವಾಗುತ್ತಿದ್ದ ನಂದಿಧ್ವಜ, ಈ ಬಾರಿ 16 ಲಕ್ಷ ರೂ.ಗೆ ಮಾರಾಟವಾಗಿದೆ. ಪ್ರತಿ ಬಾರಿ ನಂದಿ ಧ್ವಜ ಗೆದ್ದವರು ಶಾಸಕರಾಗಿ ಆಯ್ಕೆಯಾಗುತ್ತಾರೆ ಎಂಬ ನಂಬಿಕೆ ಇದೆ. ಈ ಪದ್ಧತಿ ಹಲವು ವರ್ಷಗಳಿಂದ ನಡೆದುಕೊಂಡು ಬಂರುತ್ತಿದೆ.
ಕಳೆದ ಬಾರಿಯು ನಂದಿ ಧ್ವಜವನ್ನು ರಂಗನಾಥ್ ಗೆದ್ದಿದ್ದರು. ಬಳಿಕ ಕುಣಿಗಲ್ ಕ್ಷೇತ್ರದ ಶಾಸಕರಾಗಿ ಆಯ್ಕೆ ಆಗಿದ್ದರು. ಅದೇ ರೀತಿ ಈ ಬಾರಿಯ ಹರಾಜಿನಲ್ಲೂ 16 ಲಕ್ಷ ರೂ.ಗೆ ನಂದಿಧ್ವಜವನ್ನು ಗೆದ್ದಿದ್ದಾರೆ. ಈ ಬಾರಿಯು ಕುಣಿಗಲ್ನಿಂದ ಅವರೇ ಶಾಸಕರಾಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. (ದಿಗ್ವಿಜಯ ನ್ಯೂಸ್)