ಜು.20ರಂದು ಕುಂದಾಪ್ರ ಕನ್ನಡ ಉತ್ಸವ 2025

ವಿಜಯವಾಣಿ (24)
Published on

ಬೆಂಗಳೂರು: ಟೀಮ್ ಕುಂದಾಪುರಿಯನ್ಸ್ ಪ್ರಸ್ತುತಪಡಿಸುವ ಕುಂದಾಪ್ರ ಕನ್ನಡ ಉತ್ಸವ 2025 ಇದೇ ಜುಲೈ 20ರಂದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆಯಲಿದೆ.

ಪ್ರತಿ ವರ್ಷದಂತೆ ಈ ವರ್ಷವು ಹಲವು ವಿಶೇಷತೆಗಳಿಂದ ಕೂಡಿರುವ ಉತ್ಸವವನ್ನು ಅದ್ದೂರಿಯಾಗಿ ಬಸವೇಶ್ವರ ನಗರದ ನೇತಾಜಿ ಮೈದಾನದಲ್ಲಿ ಜುಲೈ 20ರ ಭಾನುವಾರ(ನಾಳೆ) ಆಚರಿಸಲಾಗುತ್ತಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 6.30 ರವರೆಗೆ ಕಾರ್ಯಕ್ರಮ ನಡೆಯಲಿದ್ದು, ಯಕ್ಷಗಾನ, ಕುಂದಾಪುರ ಸಾಂಸ್ಕೃತಿಕ ವೈಭವ, ಸ್ವಾಮಿಕೋಲ, ಕಂಬಳ ಒಳಲ್, ಕುಂದಾಪುರದ ಗ್ರಾಮೀಣ ಕ್ರೀಡಾಕೂಟ, ಅಹಾರ ಮೇಳ ಸೇರಿ ಹಲವು ಕಾರ್ಯಕ್ರಮ ಇರಲಿದೆ.

ಕುಂದಾಪ್ರ ಕನ್ನಡ ಉತ್ಸವಕ್ಕೆ ನೀವೇ ಅತಿಥಿ

ವೇಗವಾಗಿ ಓಡುವ ಸಿಲಿಕಾನ್ ಸಿಟಿ ಬೆಂಗಳೂರಿನ ಬದುಕಿನ ಒತ್ತಡದಲ್ಲಿ ಭಾಷೆ-ಸಂಸ್ಕ್ರತಿ ಹಿಂದೆ ಉಳಿದುಬಿಟ್ಟಿದ್ಯೋ ಎನ್ನುವ ಭಾವ ಸಹಜ. ಹೀಗೆ ಆದಾಗೆಲ್ಲ ಮತ್ತೆ ಕೂಡಿಸಿ ಗುಣಿಸಿ ಬದುಕು-ಭಾಷೆಯನ್ನು ಸಂಭ್ರಮಿಸೋದು ಇಂದಿನ ತುರ್ತಾಗಿದೆ. ಇದರ ಭಾಗವಾಗಿಯೇ ಕುಂದಾಪ್ರ ಕನ್ನಡ ಉತ್ಸವ ಆಯೋಜನೆಗೊಂಡಿದೆ. ಕೊಲ್ಲೂರು ಮೂಕಾಂಬಿಕೆಯ ಟ್ಯಾಬ್ಲೋ ಮೆರವಣಿಗೆ, ಯಕ್ಷಗಾನ ವೈಭವ, ಕುಂದಾಪುರದ ಜಾನಪದ ನೃತ್ಯ, ಮಕ್ಕಳ ವಿಭಿನ್ನ ಕಾರ್ಯಕ್ರಮ, ಕುಂದಾಪ್ರದ ಆಟೋಟ ಸ್ಪರ್ಧೆಗಳು ಸೇರಿ ಹತ್ತು ಹಲವು ಕಾರ್ಯಕ್ರಮಗಳು ಇರಲಿದೆ.

ವೈವಿದ್ಯಮಯ ಕಾರ್ಯಕ್ರಮಗಳು

  • ಕೊಲ್ಲೂರು ತಾಯಿ ಮೂಕಾಂಬಿಕೆಯ ಟ್ಯಾಬ್ ಮೆರವಣಿಗೆ
  • ಮಂತ್ರಮಹಿಮೆ: ಯಕ್ಷವೈಭವ
  • ಒಡ್ಸ್‌: ಕುಂದಾಪುರದ ಸಾಂಸ್ಕೃತಿಕ ಕಲೆಗಳ ನೃತ್ಯರೂಪಕ ದಿನ್ಸಾಲ್-ಗುಬ್ಬ-ಒಳಲ್-ಹೌಂದರಾಯನ ವಾಲ್ಕ-ಪಾಣರಾಟ.
  • ಕಟ್ಟೆ ಪಂಚಾಯ್ತಿ: ಇವ್ ಬಾಯಿಗ್ ಭಜಿ ಹಾಕದ್ ಯಾರ್ ಮರ್ರೆ
  • ಹಾಡು ಸಂತೋಷಕ್ಕೆ: ಒಂದ್ ಮೈಕ್, ಎರಡ್ ಪೆಟ್, ನಾಲ್ಟ್ ಸ್ಟೆಪ್
  • ರಂಗ್: ಮಕ್ಕಳಿಂದ ವಿವಿಧ ವಿಭಿನ್ನ ಕಾರ್ಯಕ್ರಮ
  • ಹಂಬ್ಲ್​ ಹಳೆ ಕಾಲದ ವಸ್ತುಗಳ ಪ್ರದರ್ಶನ
  • ಸಂಸ್ಕೃತಿ ಶಿಬಿರ: ಮರೆಯುತ್ತಿರೋ ಕಲೆ-ಸಂಸ್ಕೃತಿಗಳ ಕಲಿಕಾ ಶಿಬಿರ
  • ಬೆನ್ ಚೆಂಡ್: ಕುಂದಗನ್ನಡದ ಆಟೋಟ ಸ್ಪರ್ಧೆ
  • ಕೈಕೋಚ್: ಸಾಂಸ್ಕೃತಿಕ ಸ್ಪರ್ಧೆಗಳು
  • ಕಾಂತಾರ: ಇದ್ ಆತರ ಈತರ ಅಲ್ಲ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net