confiscation 10.58 ಲಕ್ಷ ರೂ. ಪರಿಹಾರ ಬಾಕಿ ಕುಮಟಾ ಎಸಿ ಕಚೇರಿಯ ಪೀಠೋಪಕರಣ ಜಪ್ತು

confiscation
Published on

ಕುಮಟಾ: ಜೆಎಂಎಪ್‌ಸಿ ನ್ಯಾಯಾಲಯದ ಆದೇಶದಂತೆ ಕುಮಟಾ ಎಸಿ ಕಚೇರಿಯ ಸಾಮಗ್ರಿಗಳನ್ನು ಬುಧವಾರ ಜಪ್ತು (confiscation) ಮಾಡಲಾಯಿತು. ಕುಡಿಯುವ ನೀರಿನ ಯೋಜನೆಗಾಗಿ ಭೂ ಸ್ವಾಧೀನ ಮಾಡಿಕೊಂಡ ಜಮೀನಿಗೆ ಪರಿಹಾರ ನೀಡದ ಕಾರಣ ಈ ಕಾರ್ಯ ನೆರವೇರಿಸಲಾಯಿತು. ಭೂ  ಮಾಲೀಕರ ಉದಯ ಬಾಳಗಿ ಹಾಗೂ ಅವರ ವಕೀಲರ ಸಮ್ಮುಖದಲ್ಲಿ ಕುಮಟಾ ಜೆಎಂಎಫ್‌ಸಿ ನ್ಯಾಯಾಲಯದ ಸಿಬ್ಬಂದಿ ಜಪ್ತು ಪ್ರಕ್ರಿಯೆಯನ್ನು ನಡೆಸಿದರು. ಎಸಿ ಕಚೇರಿ ಪೀಠೋಪಕರಣ, ಕಂಪ್ಯೂಟರ್, ಪ್ರಿಂಟರ್ ಮುಂತಾದ ವಸ್ತುಗಳನ್ನು ವಶಕ್ಕೆ ಪಡೆದರು. ಕಡತಗಳಿರುವ ಕಪಾಟುಗಳಿಗೆ ಜಪ್ತಿ ಮಾಡಲಾಗಿದೆ ಎಂಬ ಫಲಕ ಅಂಟಿಸಿದರು.

confiscation ಏಕೆ

ಗಂಗಾವಳಿ ನದಿಯಿಂದ ಗೋಕರ್ಣಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಸಲುವಾಗಿ ಅಂಕೋಲಾದ ಗುಂಡಬಾಳದಲ್ಲಿ ಉದಯ ಬಾಳಗಿ ಅವರ 4 ಗುಂಟೆ ಜಮೀನನ್ನು ಕುಮಟಾ ಎಸಿ ಅವರು ಭೂ ಸ್ವಾಧೀನ ಮಾಡಿಕೊಂಡಿದ್ದರು. ಅದಕ್ಕೆ ಪರಿಹಾರ ನೀಡದ ಬಗ್ಗೆ ಉದಯ ಬಾಳಗಿ ನ್ಯಾಯಾಲಯದ ಮೊರೆ ಹೋಗಿದ್ದರು. 10.58 ಲಕ್ಷ ರೂ. ಪರಿಹಾರ ನೀಡುವಂತೆ ಜೆಎಂಎಫ್‌ಸಿ ನ್ಯಾಯಾಲಯ 2022 ರಲ್ಲಿ ತೀರ್ಪು ನೀಡಿತ್ತು. ಆದರೂ ಎಸಿ ಕಚೇರಿಯಿಂದ ಪರಿಹಾರ ಪಾವತಿಯಾಗದ ಬಗ್ಗೆ ಆಕ್ಷೇಪಿಸಿ ಉದಯ ಬಾಳಗಿ ಅವರು ಅಮಲು ಬಚಾವಣೆ ಅರ್ಜಿ ಸಲ್ಲಿಸಿದ್ದರು. ಅದನ್ನು ಪರಿಗಣಿಸಿದ ನ್ಯಾಯಾಲಯ ಮಂಗಳವಾರ ಎಸಿ ಕಚೇರಿಯ ಸಾಮಗ್ರಿಗಳನ್ನು ಜಪ್ತು ಮಾಡಲು ಆದೇಶ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net