ಶವ ಎಸೆದ ಕಾರಣ ಕುಂಭ ಮೇಳದ ನೀರು ಕಲುಷಿತಗೊಂಡಿದೆ: ಸಂಸದೆ ಜಯಾಬಚ್ಚನ್​ | Kumbh Mela

dk (63) (1)
Published on

Kumbh Mela: ಪ್ರಯಾಗ್​ರಾಜ್​ನ ಕುಂಭಮೇಳದಲ್ಲಿ ಕಳೆದ ತಿಂಗಳು(ಜನವರಿ) ನಡೆದ ಕಾಲ್ತುಳಿತದಲ್ಲಿ ಮೃತಪಟ್ಟ ಶವಗಳನ್ನು ತ್ರಿವೇಣಿ ಸಂಗಮದಲ್ಲಿ ಎಸೆದ ಪರಿಣಾಮ ನದಿ ಕಲುಷಿತಗೊಂಡಿದೆ ಎಂದು ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್​​ ಸೋಮವಾರ ಮಾಧ್ಯಮಗಳ ಹೇಳಿಕೆ ನೀಡಿದ್ದಾರೆ.

ಇಲ್ಲಿನ ಯೋಗಿ ಅದಿತ್ಯನಾಥ್​ ಸರ್ಕಾರ ಕುಂಭಮೇಳದಲ್ಲಿನ ಜನಸಾಮಾನ್ಯರಿಗೆ ಸೌಲಭ್ಯಗಳು ಕಲ್ಪಿಸಿಲ್ಲ ಎಂದು ಆರೋಪಿಸಿದ ಜಯಾ, ಸದ್ಯ ಎಲ್ಲಲ್ಲಿ ನೀರು ಕಲುಷಿತವಾಗಿದೆ ಎಂದರೆ, ಅದು ಕಾಲ್ತುಳಿತದಲ್ಲಿ ಮೃತಪಟ್ಟ ಶವಗಳನ್ನು ನದಿಗೆ ಎಸೆಯಲಾಗಿದೆ. ಇದರಿಂದ ನೀರು ಕಲುಷಿತವಾಗಿದೆ. ಇಂತಹ ಸಮಸ್ಯೆಗಳನ್ನು ನಿಜವಾಗಿ ಸರ್ಕಾರ ಪರಿಹರಿಸುತ್ತಿಲ್ಲ. ಜ.29ರಂದು ನಡೆದ ಕಾಲ್ತುಳಿತದಲ್ಲಿ ಮೃತಪಟ್ಟ ಶವಗಳ ಮರಣೋತ್ತರ ಪರೀಕ್ಷೆ ಮಾಡಿಲ್ಲ ಎಂದು ಯೋಗಿ ಸರ್ಕಾರ ವಿರುದ್ಧ ಆರೋಪಿಸಿದ್ದಾರೆ.

ಇದೇ ನೀರು ಜನರಿಗೆ ತಲುಪುತ್ತದೆ.ಇದರ ಬಗ್ಗೆ ಬಿಜೆಪಿ ಯಾವುದೇ ವಿವರಣೆ ನೀಡುತ್ತಿಲ್ಲ. ಜನರಿಗೆ ಕಣ್ಣೋರಿಸುವ ತಂತ್ರ ಸರ್ಕಾರ ಮಾಡುತ್ತಿದೆ. ಅವರು ನೀರಿನ (ಜಲಶಕ್ತಿಯ) ಬಗ್ಗೆ ಉದ್ದುದ್ದ ಭಾಷಣ ಮಾಡುತ್ತಾರೆ. ಮೇಳದಲ್ಲಿ ಕೋಟಿಗಟ್ಟಲೇ ಜನ ಸೇರಿದ್ದಾರೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net