

ಚಿಕ್ಕಮಗಳೂರು: ಕಡೂರು ತಾಲೂಕು ಯಗಟಿ ಗ್ರಾಮದಲ್ಲಿ ಜ.28ರಂದು ಕುಮಾರವ್ಯಾಸ ಜಯಂತಿ ಮತ್ತು ಅನ್ನಪೂರ್ಣಾ ಭೋಜನ ಶಾಲೆ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ವೈಎಸ್‌ವಿ ದತ್ತ ತಿಳಿಸಿದರು.
ಅಂದು ಬೆಳಗ್ಗೆ 7ರಿಂದ ಸಂಜೆವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಬೆಳಗ್ಗೆ 10ಕ್ಕೆ ವ್ಯಾಸಪೂಜೆ ನಡೆಯಲಿದ್ದು, ಗೌರಿಗದ್ದೆಯ ದತ್ತಾವಧೂತ ವಿನಯ್ ಗುರೂಜಿ ಭಾಗವಹಿಸಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕುಮಾರವ್ಯಾಸನ ವಂಶಜರು ವ್ಯಾಸಪೂಜೆ ಸಮರ್ಪಿಸಲಿದ್ದು ಶೃಂಗೇರಿ ಶ್ರೀ ಶಾರದಾ ಪೀಠದ ಆಡಳಿತಾಧಿಕಾರಿ ಡಾ. ವಿ.ಆರ್.ಗೌರಿಶಂಕರ್ ಉಪಸ್ಥಿತರಿರುವರು. ಮಧ್ಯಾಹ್ನ 12ಕ್ಕೆ ಕುಮಾರವ್ಯಾಸ ಭಾರತ ವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮವಿಎ. ಶಿವಮೊಗ್ಗದ ಮತ್ತೂರು ಹೊಸಳ್ಳಿಯ ಪ್ರಸಾದ್ ಭಾರದ್ವಾಜ್ ಜತೆಗೆ ನಾನು ವಾಚನ-ವ್ಯಾಖ್ಯಾನ ನಡೆಸುತ್ತೇನೆ ಎಂದು ತಿಳಿಸಿದರು.
ವ್ಯಾಸ ಜಯಂತಿ ಅಂಗವಾಗಿ ಜ.30ರಂದು ಗ್ರಾಮದೇವತೆ ಶ್ರೀ ಅರೇಕಲ್ಲಮ್ಮನ ಬಾನ, ಫೆ.1ರಂದು ಸಿಡಿ ಉತ್ಸವ ಹಾಗೂ 3ರಂದು ಅಮ್ಮನವರ ತೇರು ಕಾರ್ಯಕ್ರಮವಿರುತ್ತದೆ ಎಂದರು. ಜೆಡಿಎಸ್ ಮುಖಂಡರಾದ ಚಂದ್ರಪ್ಪ, ಚಿದಾನಂದ ಸುದ್ದಿಗೋಷ್ಠಿಯಲ್ಲಿದ್ದರು