ಮೇಲ್ಮನೆಯಲ್ಲಿ ಕುಲಶಿತ ಬಾಟೆಲ್ ನೀರು ಪ್ರದರ್ಶಿಸಿ ಗಮನ ಸೆಳೆದ ಅರುಣ್

Published on

ವಿಜಯವಾಣಿ ಸುದ್ದಿಜಾಲ, ಬೆಂಗಳೂರು:
ಬೆಂಗಳೂರು ನಗರದಲ್ಲೆ ಕಲುಷಿತ ನೀರು ಸರಬರಾಜಾಗ್ತಿದೆ. ರಾಜಾಜಿನಗರದಿಂದ ಈ ಬಾಟಲ್ ತಂದಿದ್ದೇನೆ ನೋಡಿ ಎಷ್ಟು ಕಲುಷಿತವಾಗಿದೆ ಎಂದು ನೀರಿನ ಬಾಟಲ್ ಪ್ರದರ್ಶಿಸಿದ ಬಿಜೆಪಿ ಅರುಣ್ ಸದನದ ಗಮನ ಸೆಳೆದರು.
ಕಲುಷಿತ ನೀರಿನಿಂದ ರಾಜ್ಯದಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಗೂ ಶುದ್ಧ ಕುಡಿಯುವ ನೀರನ್ನ ಒದಗಿಸುವುದು ಸರ್ಕಾರದ ಜವಾಬ್ದಾರಿ. ಈ ನಿಟ್ಟಿನಲ್ಲಿ ಆ ಸಮಸ್ಯೆಯನ್ನ ಪರಿಹರಿಸಲು ಆದ್ಯತೆ ನೀಡಬೇಕು ಎಂದರು.
ಪ್ರಶ್ನೆಗೆ ಉತ್ತರಿಸಿದ ಸಚಿವ ಸುರೇಶ್ ರಾಜ್ಯದ 4 ಜಿಲ್ಲೆಗಳಲ್ಲಿ ಕಲುಷಿತ ನೀರು ಕುಡಿದು ಸಾವನ್ನಪ್ಪಿದ ಪ್ರಕರಣದಲ್ಲಿ ಸಂಬಂದಿಸಿದ ಅಧಿಕಾರಿಗಳನ್ನ ಅಮಾನತು ಮಾಡಲಾಗಿದೆ ಎಂದರು.
ಕುಡಿಯುವ ನೀರನ್ನ ಸರ್ಕಾರಿ ಲ್ಯಾಬ್ ನಲ್ಲಿ ತಪಾಸಣೆ ಮಾಡಿಯೇ ಸರಬರಾಜು ಮಾಡ್ತಿದ್ದೇವೆ.
ಆರ್‌ಓ ಮೂಲಕ ನೀರನ್ನ ಕೊಡ್ತಿದ್ದೇವೆ. ಟ್ಯಾಂಕರ್ ಮೂಲಕ ನೀರನ್ನ ಒದಗಿಸುತ್ತಿದ್ದೇವೆ ಎಂದರು.
6.63 ಕೋಟಿ ಹಣವನ್ನ ಕುಡಿಯುವ ನೀರಿಗೆ ಖರ್ಚು ಮಾಡಿದ್ದೇವೆ. 37 ಕೋಟಿ ರೂ ಕುಡಿಯುವ ನೀರಿನ ಪೈಪ್ ಅಳವಡಿಕೆಗೆ ಒದಗಿಸಿದ್ದೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net