ಕುಕ್ಕೆ ದೇವಸ್ಥಾನದ ಆದಾಯ ಶತಕೋಟಿ ತಲುಪುವುದು ಕರೊನಾದಿಂದ ಮಿಸ್!

kukke templ
Published on

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಾಲಯ 2019-20ನೇ ಸಾಲಿನ ಆರ್ಥಿಕ ವರ್ಷದಲ್ಲಿ 98.92 ಕೋಟಿ ರೂ.ಆದಾಯ ಗಳಿಸಿದ್ದು, ಇದು ಶತಕೋಟಿ ರೂ. ತಲುಪುವುದು ಕರೊನಾ ಹಾವಳಿಯಿಂದಾಗಿ ಸ್ವಲ್ಪದರಲ್ಲೇ ಮಿಸ್ ಆಗಿದೆ.

2019 ಏಪ್ರಿಲ್‌ನಿಂದ 2020 ಮಾರ್ಚ್ 31ರ ತನಕದ ಆರ್ಥಿಕ ವರ್ಷದಲ್ಲಿ ದೇವಳಕ್ಕೆ ಈ ಆದಾಯ ಬಂದಿದೆ. ಕಳೆದ ವರ್ಷಕ್ಕಿಂತ ಈ ಬಾರಿ 6.83 ಕೋಟಿ ರೂ. ಅಧಿಕ ಆದಾಯ ಬಂದಿದೆ.

ಲಾಕ್‌ಡೌನ್‌ನಿಂದಾಗಿ ದೇವಸ್ಥಾನ ಫೆಬ್ರವರಿಯಿಂದ ಬಂದ್ ಆಗಿತ್ತು. ಈ ಬಾರಿ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ಆದಾಯ ಬರುತ್ತಿದ್ದರೆ ಅಥವಾ ದೇವಳದಲ್ಲಿ ಹುಂಡಿ ಎಣೆಕೆಯಾಗಿದ್ದರೂ, ದೇವಳದ ಆದಾಯ ನೂರು ಕೋಟಿ ತಲುಪುತ್ತಿತ್ತು. ಅಲ್ಪ ಪ್ರಮಾಣದಲ್ಲಿ ನೂರು ಕೋಟಿ ಆದಾಯ ಗಳಿಕೆ ಮಿಸ್ ಆಗಿದೆ.

ಈ ಬಾರಿ ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪದಿಂದ ಎರಡು ತಿಂಗಳು ಭಕ್ತರ ಆಗಮನ ಕಡಿಮೆಯಾಗಿತ್ತು. ಹಾಗಿದ್ದರೂ ಈ ಆರ್ಥಿಕ ವರ್ಷದಲ್ಲಿ 6.83 ಕೋಟಿ ರೂ. ಅಧಿಕ ಆದಾಯ ಬಂದಿರುವುದು ಗಮನಾರ್ಹವಾಗಿದೆ.

2006-07ರಿಂದಲೂ ಈ ದೇವಸ್ಥಾನ ಅಧಿಕ ಆದಾಯ ಗಳಿಸುತ್ತಿದ್ದು, ಸತತ ಎಂಟನೇ ವರ್ಷ ರಾಜ್ಯದ ನಂಬರ್ ಒನ್ ಆದಾಯ ಗಳಿಕೆಯ ದೇವಸ್ಥಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net