

ಕುಕನೂರು: ಕ್ಷೇತ್ರದಲ್ಲಿ ರಾಜಕೀಯ ಚಟುವಟೆಕೆ ಜೋರಾಗಿದ್ದು, ಇದರ ನಡುವೆ ಅವಳಿ ಯಲಬುರ್ಗಾ-ಕುಕನೂರು ತಾಲೂಕಿನ ಜ್ವಲಂತ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಜನಾಂದೋಲನ ಹಮ್ಮಿಕೊಳ್ಳಲು ಸಮಾನ ಮನಸ್ಕರ ವೇದಿಕೆ ಸೃಷ್ಠಿಯಾಗಿದೆ.
ಪಟ್ಟಣದಲ್ಲಿ ಇತ್ತೀಚೆಗೆ ಅವಳಿ ತಾಲೂಕಿನ ವಿವಿಧ ಗ್ರಾಮಗಳ ಸಮಾನ ಮನಸ್ಕ ಕೃಷಿಕರು, ಯುವಕರು ಸಭೆ ನಡೆಸಿ ವಿವಿಧ ವಿಷಯಗಳ ಕುರಿತು ಚರ್ಚಿಸಲಾಗಿದೆ. ಮುಖ್ಯವಾಗಿ ಕೃಷಿಕರಿಗೆ ಕಾಡುತ್ತಿರುವ ಕಾಡು ಪ್ರಾಣಿಗಳ ಹಾವಳಿ ತಡೆಯುವುದು, ಕೃಷಿ ಭೂಮಿಯಲ್ಲಿ ವಿಂಡ್ ಫವರ್ ನಿರ್ಮಾಣಕ್ಕೆ ಕಡಿವಾಣ ಹಾಕುವುದು, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ನೂತನ ಅಭಿಯಾನ ಹಮ್ಮಿಕೊಳ್ಳುವುದು, ಸರ್ಕಾರಿ ಕಚೇರಿಗಳಲ್ಲಿ ನಡೆಯುವ ಭ್ರಷ್ಟಾಚಾರ ತಡೆಯುವುದು, ಕೃಷಿಕರಿಗೆ ನೀಡುವ ವಿದ್ಯುತ್ ಸಂಪರ್ಕದಲ್ಲಾಗುವ ಲೋಪಗಳನ್ನು ಸರಿಪಡಿಸುವುದು, ಗ್ರಾಪಂ, ತಾಲೂಕು ಪಂಚಾಯಿತಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ತಡೆಯುವುದು ಹಾಗೂ ಈ ಬಗ್ಗೆ ಜರನಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳುವುದು ಸೇರಿದಂತೆ ಸದ್ಯದ ಸಾಮಾಜಿಕ, ರಾಜಕೀಯ, ಆರ್ಥಿಕ ಮತ್ತು ಶೈಕ್ಷಣಿಕ ಪರಿಸ್ಥಿತಿ ಅದೋಗತಿ ತಲುಪಿದ್ದು, ಅದಕ್ಕೆ ಕಾರಣವಾದ ಅಂಶಗಳನ್ನು ಚರ್ಚಿಸಿದ್ದರು.
ಮುಂಬರುವ ಚುನಾವಣೆಯಲ್ಲಿ ಈ ಎಲ್ಲ ಸಮಸ್ಯೆಗಳಿಗೂ ಪೂರಕವಾಗಿ ಕೆಲಸ ನಿರ್ವಹಿಸಬಲ್ಲ ಸಮರ್ಥ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಬಗ್ಗೆ ಗಂಭೀರ ಚರ್ಚೆ ನಡೆಸಿದರು. ಸಭೆಯಲ್ಲಿ ಸಮಾನ ಮನಸ್ಕರಾದ ಭೀಮರಡ್ಡಿ ಶ್ಯಾಡ್ಲಿಗೇರಿ, ಲಂಕೇಶ ವಕೀಲರು, ಮಲ್ಲಿಕಾರ್ಜುನ ಗಡಗಿ, ಜಗದೀಶ ಚಟ್ಟಿ, ಶರಣಪ್ಪ ಹಿರೇಮನಿ, ಅಲ್ಲಾಸಾಬ್ ಕಟ್ಟಿಮನಿ, ವೆಂಕಟೇಶ ಟಿ. ನಾಯಕ್, ಎನ್. ಖಾಜಾಸಾಬ್, ಕೆ. ಮಾಷಾಸಾಬ್, ಹನಮರಡ್ಡಿ ವಕ್ಕಳದ, ರಸೂಲ್ ಸಾಬ್ ಹಿರೇಮನಿ, ಮನ್ಸೂರ್ ಸಾಬ್ ಆದಾಪೂರ, ಸೈಯದ್ ಮುದೋಳ, ವೆಂಕಟೇಶ ಕಾರಬಾರಿ, ಬೀಮಸಿ ಈರಗಾರ, ಮೇರಾಸಾಬ್ ಬೋಜಿ, ಖಾಜಾಸಾಬ್ ಬಾಗಲಿ, ಈರಪ್ಪ ಲದ್ದಿ, ಎನ್. ಹನುಮಂತಪ್ಪ ಇತರರಿದ್ದರು.