

ಕುಕನೂರು: ಎಕಸ್ (ಗೊಂಬೆ) ಕಂಪನಿಗೆ ಭೂಮಿ ನೀಡುವುದಿಲ್ಲ ಎಂದು ರೈತರು ತಾಲೂಕಿನ ಭಾನಾಪುರ ಗ್ರಾಮದ ಎಕಸ್ ಕಂಪನಿಯ ಪಕ್ಕದ ಜಮೀನಿನಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಭಾನಾಪುರ ಹಾಗೂ ತಳಬಾಳ ಸೀಮಾದ ಕೃಷಿ ಭೂಮಿಯನ್ನು ಎಕಸ್ ಎಸ್‌ಇಜೆಡ್ ಕಂಪನಿ ಭೂ ಸ್ವಾಧೀನಕ್ಕೆ ಪ್ರಕ್ರಿಯೆಯನ್ನು ಬಿಡಬೇಕು. ಈಗಾಗಲೇ ಸುಮಾರು 4 ನೂರು ಎಕರೆ ಭೂಮಿ ಖರೀದಿಸಿ ಕಂಪನಿ ಆರಂಭಿಸಲಾಗಿದೆ. ಕಾರ್ಯನಿರ್ವಹಣೆಗೆ ಬೇಕಾದಂತಹ ಅವಶ್ಯಕತೆಗಿಂತ ಹೆಚ್ಚು ಭೂಮಿಯನ್ನು ಹೊಂದಿದ್ದಾರೆ. ಆದರೂ ಸಹ ದುರಾಸೆ ಮತ್ತು ಮಾರುಕಟ್ಟೆ ದರದಲ್ಲಿ ಎಕರೆಗೆ ಸದ್ಯ ಕೋಟ್ಯಂತರ ರೂ.ಬೆಲೆ ಬಂದಿವೆ. ಇದರಿಂದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಮೂಲಕ ಖರೀದಿಸಿದರೇ ಕಡಿಮೆ ಬೆಲೆ ಸಿಗುಬಹುದು ಎಂಬ ದುರಾಸೆಯಿಂದ ಹೊಂಚು ಹಾಕಿ ಭೂಮಿಯನ್ನು ಹಗಲು ದರೋಡೆ ಮೂಲಕ ಖರೀದಿಸಲು ಹೊರಟಿದ್ದಾರೆ ಎಂದು ರೈತರು ದೂರಿದರು.
ಕಂಪನಿ ಸ್ಥಾಪಿಸುವ ಮೊದಲು ಮುಗ್ಧ ರೈತರಲ್ಲಿ ಸೋಲಾರ್ ವಿದ್ಯುತ್ ಘಟಕ ಸ್ಥಾಪಿಸಲಾಗುವುದುದೆಂದು ಹೇಳಿ ಭೂಮಿ ಖರೀದಿ ಮಾಡಿದ್ದಾರೆ. ಇಲ್ಲಿ ಏಜೆಂಟರುಗಳನ್ನು ನೇಮಿಸಿ, ಸುಳ್ಳು ಹೇಳಿ ಅತಿ ಕಡಿಮೆ ದರಕ್ಕೆ ಖರೀದಿಸಿ ರೈತರಿಗೆ ಮೋಸ ಮಾಡಿದ್ದಾರೆ. ಅಲ್ಲದೇ ಕೆಲವು ರೈತರಿಗೆ ಕಂಪನಿಯಲ್ಲಿ ಕೆಲಸ ನೀಡುತ್ತೇವೆ ಎಂದು ಭರವಸೆ ನೀಡಿ, ಭೂಮಿ ಖರೀದಿ ಮಾಡಲಾಗಿದೆ. ಕಂಪನಿಯಲ್ಲಿ ಕಸ ತೆಗೆಯಲು, ಉದ್ಯಾನವನ ನಿರ್ವಹಣೆ ಕೆಳಮಟ್ಟದ ಕೆಲಸ ನೀಡಿದ್ದಾರೆ. ಅಲ್ಲದೇ ಕಂಪನಿ ಸುತ್ತ ಇರುವ ಗ್ರಾಮಗಳ ಯುವಕರಿಗೆ ಉದ್ಯೋಗ ನೀಡುವ ಭರವಸೆ ನೀಡಿದ್ದ ಕಂಪನಿ ಸದ್ಯ ಒಬ್ಬರಿಗೂ ಉದ್ಯೋಗ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಕೆಐಡಿಬಿನಿಂದ ಭೂಮಿ ಸರ್ವೇ ಕಾರ್ಯವನ್ನು ತಡೆದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ರೈತರಾದ ಮಲ್ಲಿಕಾರ್ಜುನ ನಂದವಾಡಗಿ, ಸುರೇಶ ಸೋಂಪೂರ, ವೆಂಕಟೇಶ ಗಮನಿ, ಭೀಮಪ್ಪ ಮಡಿವಾಳರ