ಕೂಡ್ಲಿಗಿಯಲ್ಲಿ ಹಾಡಹಗಲೇ ೧೦.೫೦ ಲಕ್ಷ ರೂ. ಕಳ್ಳತನ

IMG-20221214-WA0060.jpg
Published on

ಕಾರಿನ ವಿಂಡೋ ಗ್ಲಾಸ್ ಹೊಡೆದು ದುಷ್ಕೃತ್ಯ

ಕೂಡ್ಲಿಗಿ(ವಿಜಯನಗರ):‌ ಹಾಡಹಗಲೇ  ಕಾರಿನ ವಿಂಡೋ ಗ್ಲಾಸ್ ಹೊಡೆದು ೧೦ .೫೦ ಲಕ್ಷ  ರೂ. ನಗದು ದೋಚಿರುವ ಘಟನೆ ಪಟ್ಟಣದಲ್ಲಿ ಬುಧವಾರ ನಡೆದಿದೆ.
ತಾಲೂಕಿನ ಹೊಸಹಳ್ಳಿ ಗ್ರಾಮದ ಎಚ್.ಬಿ. ವೀರಭದ್ರಪ್ಪ ಅವರ ಹಣ ಕಳ್ಳತನವಾಗಿದೆ. ವೀರಭದ್ರಪ್ಪ ಅವರು ಪಟ್ಟಣದ ಸಿಂಡಿಕೇಟ್ ಬ್ಯಾಂಕ್ ಹಾಗೂ ಪಿಜಿಬಿ ಬ್ಯಾಂಕಿನಲ್ಲಿ ಒಟ್ಟು 10.50 ಲಕ್ಷ ರೂ. ಗಳನ್ನು ಡ್ರಾ ಮಾಡಿಕೊಂಡಿದ್ದರು. ಬಳಿಕ ಸಂಡೂರು ರಸ್ತೆಯಲ್ಲಿರುವ ಬಿಸಿಎಂ ಇಲಾಖೆ ಕಚೇರಿ ಬಳಿ ನಿಲ್ಲಿಸಿ ಅಧಿಕಾರಿಗಳನ್ನು ಕಾಣಲು ಕಚೇರಿ ಒಳಗೆ ಹೋಗಿದ್ದಾರೆ.
ಕೆಲ ಸಮಯದ ನಂತರ ವಾಪಸ್ ಬಂದಾಗ  ಕೃತ್ಯ ಬೆಳಕಿಗೆ ಬಂದಿದೆ. ಕಾರಿನ ಮುಂದಿನ ಎಡ ಭಾಗದ ಗ್ಲಾಸ್ ಹೊಡೆದು, ಹಣದ ಚೀಲವನ್ನು ಕದ್ದೊಯ್ದಿರುವುದು ಗೊತ್ತಾಗಿದೆ.
ಈ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದರು. ಬಳಿಕ ಎಸ್ಪಿ ಶ್ರೀಹರಿಬಾಬು ಬಿ.ಎಲ್. ಸ್ಥಳಕ್ಕೆ‌ ದಾವಿಸಿ ಪ್ರಾಥಮಿಕ ಮಾಹಿತಿ ಕಲೆ ಹಾಕಿದರು. ತನಿಖಾಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದರು.‌
ಈ ಕುರಿತು ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net