ಹುಬ್ಬಳ್ಳಿ: ಇಲ್ಲಿಯ ಕೆಎಲ್ಇ ಸಂಸ್ಥೆಯ ಪಿ.ಸಿ. ಜಾಬಿನ್ ಕಾಲೇಜಿನ ಬಿಸಿಎ ವಿದ್ಯಾರ್ಥಿನಿ ಸಿಂಚನಾ ಡಿ. ಅವರು ಯೋಗ ವಿಭಾಗದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಬ್ಲೂ ಆಗಿ ಆಯ್ಕೆಯಾಗಿದ್ದಾರೆ.
ಭುವನೇಶ್ವರದಲ್ಲಿ ಡಿ. 24ರಿಂದ ನಡೆಯಲಿರುವ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಮಟ್ಟದ ಯೋಗ ಪಂದ್ಯಾವಳಿಯಲ್ಲಿ ಸಿಂಚನಾ ಕವಿವಿಯನ್ನು ಪ್ರತಿನಿಧಿಸಲಿದ್ದಾಳೆ.
ಇವಳ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದೆ. ದೈಹಿಕ ಶಿಕ್ಷಣ ನಿರ್ದೇಶಕ ಡಾ. ಪ್ರಭಾಕರಣ್, ಬಿಸಿಎ ಕೋಆರ್ಡಿನೇಟರ್ ಸುನಿಲ ವೆರ್ಣೇಕರ, ಡಾ. ಎಲ್.ಡಿ. ಹೊರಕೇರಿ ಇದ್ದಾರೆ.