ಮಾಜಿ ಸಚಿವ ಕೆ. ಸುಧಾಕರ್ ಇನ್ನೂ ಮೂರು ಬಾರಿ ಸೋಲಬೇಕು!

Dr Sudhakar (2)
Published on

ಬೆಂಗಳೂರು: ಮಾಜಿ ಸಚಿವ ಕೆ. ಸುಧಾಕರ್ ಇನ್ನೂ ಮೂರು ಬಾರಿ ಸೋಲಬೇಕು ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಸುದ್ದಿಗಾರರ ಮುಂದೆ ತಮ್ಮ ಬಯಕೆ ವ್ಯಕ್ತಪಡಿಸಿದ್ದಾರೆ.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಧಾಕರ್ ದೇವಸ್ಥಾನಗಳಿಗೆಲ್ಲ ಹೋಗಿಬರುತ್ತಿದ್ದಾರೆ, ಅವರಿಗೆ ಸೋಲನ್ನು ತಡೆದುಕೊಳ್ಳುವ ಶಕ್ತಿ ದೇವರು ಕೊಡಲಿ ಎಂದು ಹಾರೈಸುವುದಾಗಿ ತಿಳಿಸಿದರು.

ಈ ಲೋಕಸಭೆ ಚುನಾವಣೆಯಲ್ಲಿ ಸೋಲಬೇಕು, ಮತ್ತೆ ಎರಡು ಬಾರಿ ನನ್ನ ವಿರುದ್ಧ ಸೋಲಬೇಕು. ಅಷ್ಟರಲ್ಲಿ ಈ ಕ್ಷೇತ್ರ ಮೀಸಲು ಕ್ಷೇತ್ರವಾಗಲಿದೆ. ಅಲ್ಲಿಗೆ ಮುಕ್ತಾಯವಾಗಲಿದೆ, ನಂತರ ಅವರು ಗೆಲ್ಲಲು ಸಾಧ್ಯವಿಲ್ಲ ಎಂದು ಪ್ರದೀಪ್ ಈಶ್ವರ್ ತಮ್ಮೊಳಗಿನ ಕುದಿ ಆಕ್ರೋಶ ಹೊರಹಾಕಿದರು.

ಕೆ. ಸುಧಾಕರ್ ಅವರು ಮಹಾನ್ ಘಟಾನುಘಟಿಯೇ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೋಚಿಂಗ್ ನಡೆಸುವ ನನ್ನ ಮೇಲೆ ಸೋತರು, ಚುನಾವಣೆಗೆ 20 ದಿನಗಳಿದ್ದಾಗ ಬಿ ಫಾರಂ ತೆಗೆದುಕೊಂಡವನ ಮುಂದೆ ಸೋತರು ಎಂದು ಲೇವಡಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net