ಕಾಲ್ತುಳಿತ ಪ್ರಕರಣ; FIR ರದ್ದು ಕೋರಿ ಹೈಕೋರ್ಟ್​ಗೆ ಕೆಎಸ್‌ಸಿಎ ಅರ್ಜಿ, ಸರ್ಕಾರ ವಿರುದ್ಧ ಗಂಭೀರ ಆರೋಪ

ವಿಜಯವಾಣಿ (30)
Published on

Bengaluru Stampede: ಜೂ.04ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಆರ್​ಸಿಬಿ ಅಭಿಮಾನಿಗಳ ದುರಂತ ಸಾವು ಪ್ರಕರಣದಲ್ಲಿ ಇದೀಗ ಆರ್​ಸಿಬಿ ಮ್ಯಾನೇಜ್​ಮೆಂಟ್​ನ ನಾಲ್ವರನ್ನು ಬಂಧಿಸಲಾಗಿದೆ. ಕ್ರಿಮಿನಲ್​ ಕೇಸ್​ ಎದುರಿಸುತ್ತಿರುವ ಕರ್ನಾಟಕ ರಾಜ್ಯ ಕ್ರಿಕೆಟ್​ (ಕೆಎಸ್​ಸಿಎ) ಇದೀಗ ಹೈಕೋರ್ಟ್​ನಲ್ಲಿ ರಿಟ್​ ಅರ್ಜಿ ಸಲ್ಲಿಸಿದೆ.

ಕಾಲ್ತುಳಿತದಲ್ಲಿ 11 ಆರ್‌ಸಿಬಿ ಅಭಿಮಾನಿಗಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಮೇಲಿನ ಎಫ್​ಐಆರ್​ ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್​ಗೆ ಕೆಎಸ್‌ಸಿಎ ಅರ್ಜಿ ಸಲ್ಲಿಸಿದೆ. ವಿಧಾನಸೌಧದ ಮುಂಭಾಗ ಸಂಭ್ರಮಾಚರಣೆಗೆ ಕರೆ ಕೊಟ್ಟಿದ್ದೇ ರಾಜ್ಯ ಸರ್ಕಾರ ಎಂದು ರಿಟ್ ಅರ್ಜಿಯಲ್ಲಿ ಸರ್ಕಾರದ ಮೇಲೆ ಕೆಎಸ್‌ಸಿಎ ಆರೋಪ ಹೊರಿಸಿದೆ.

ಅರ್ಜಿಯಲ್ಲಿ, ಸಿಎಂ, ಡಿಸಿಎಂ, ಸಚಿವರು ವೇದಿಕೆಯಲ್ಲಿ ಆಟಗಾರರನ್ನು ಸನ್ಮಾನಿಸಿದ್ದಾರೆ. ಆದರೆ, ಇದೀಗ ಸರ್ಕಾರ, ಸಚಿವರ ಮೇಲಿನ ಜನರ ಆಕ್ರೋಶದ ಹಾದಿ ತಪ್ಪಿಸಲು ಎಫ್‌ಐಆರ್ ದಾಖಲಿಸಿದೆ. ಘಟನೆಯ ಹೊಣೆಯನ್ನು ಕೆಎಸ್‌ಸಿಎ ಮೇಲೆ ಹೊರಿಸಲು ಯತ್ನಿಸಲಾಗುತ್ತಿದೆ ಎಂದು ಪ್ರತ್ಯಾರೋಪ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net