ಈಶ್ವರಪ್ಪ ಫೋಟೋವುಳ್ಳ ನೋಟು ಬಿಡುಗಡೆ ಮಾಡಿ ಅಣಕಿಸಿದ ಕಾಂಗ್ರೆಸ್!

congress bjp eshwarappa note
Published on

ಬೆಂಗಳೂರು: 40% ಕಮಿಷನ್​ ವಿರುದ್ಧ 'ಪೇಸಿಎಂ' ಅಭಿಯಾನ ನಡೆಸಿ ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಕಾಂಗ್ರೆಸ್​, ಇದೀಗ ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ ಅವರ ಭಾವಚಿತ್ರವುಳ್ಳ ನೋಟಿನ ಮಾದರಿಯನ್ನ ತಯಾರಿಸಿ ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದೆ. ಭ್ರಷ್ಟ ಜನತಾ ಪಕ್ಷ, ಕುದುರೆ ವ್ಯಾಪಾರ, 500 ಕೋಟಿ ಮೌಲ್ಯ... ಎಂಬಿತ್ಯಾದಿ ಅಕ್ಷರಗಳು ಈ ನೋಟಿನ ಮಾದರಿಯಲ್ಲಿದೆ.

ನೋಟಿನ ಮೇಲೆ ಈಶ್ವರಪ್ಪರ ಭಾವ ಚಿತ್ರವುಳ್ಳ ಫೋಟೋವನ್ನು ಟ್ವೀಟ್​ ಮಾಡಿರುವ ರಾಜ್ಯ ಕಾಂಗ್ರೆಸ್​, 'ಸಿಎಂ ಹುದ್ದೆಗೆ 2,500 ಕೋಟಿ ಪಾವತಿಸುವಾಗ ಆಪರೇಷನ್ ಕಮಲಕ್ಕೆ 500 ಕೋಟಿ ರೂ. ಹೆಚ್ಚಲ್ಲ ಅಲ್ಲವೇ ಕರ್ನಾಟಕ ಬಿಜೆಪಿ? ಕೆ.ಎಸ್​.ಈಶ್ವರಪ್ಪ ಅವರೇ ನೋಟ್ ಎಣಿಸುವ ಮೆಷಿನ್ ಇಟ್ಟಿದ್ದು, ಆಪರೇಷನ್ ಕಮಲದ 500 ಕೋಟಿ ರೂ. ಎಣಿಸುವುದಕ್ಕಾ ಅಥವಾ 40% ಕಮಿಷನ್ ಲೂಟಿಯ ಹಣ ಎಣಿಸುವುದಕ್ಕಾ? 500 ಕೋಟಿ ರೂ. ಹೂಡಿಕೆ ಹಿಂತೆಗೆಯಲೆಂದೇ ಸಂತೋಷ್ ಪಾಟೀಲ್ ಜೀವ ತೆಗೆದಿರಾ?' ಎಂದು ಪ್ರಶ್ನಿಸಿದೆ.

'ಈಶ್ವರಪ್ಪ ಅವರು ಕಾಂಗ್ರೆಸ್ ಶಾಸಕರಿಗೆ 500 ಕೋಟಿ ರೂ. ಆಮಿಷ ಒಡ್ಡಿದ್ದೆ ಎಂದು ಹೇಳಿರುವುದರಲ್ಲಿ ಯಾವ ಆಶ್ಚರ್ಯ- ಅನುಮಾನವೂ ಇಲ್ಲ. ತೆಲಂಗಾಣದಲ್ಲಿ 150 ಕೋಟಿಯ ಡೀಲ್‌ನಲ್ಲೂ ನಿಮ್ಮದೇ ನೋಟ್ ಎಣಿಸುವ ಮಷಿನ್​ ಕೆಲಸ ಮಾಡಿತ್ತೇ ಈಶ್ವರಪ್ಪನವರೇ? 40% ಕಮಿಷನ್ ಲೂಟಿಯನ್ನು ಕರ್ನಾಟಕದ ನಂತರ ತೆಲಂಗಾಣದಲ್ಲಿ ಇನ್ವೆಸ್ಟ್ ಮಾಡ್ತಿದೀರಾ?' ಎಂದು ಸರಣಿ ಟ್ವೀಟ್​ ಮೂಲಕ ಕಾಂಗ್ರೆಸ್​ ಟೀಕಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net