ಕಷ್ಟದಲ್ಲಿ ರೈತರು, ಕೂಲಿ ಕಾರ್ಮಿಕರ ಬದುಕು: ರಾಜ್ಯ ಉಪಾಧ್ಯಕ್ಷ ಜೆ.ಎನ್.ನಾಗರಾಜು ಬೇಸರ

13_11_Mdy_04(Sammelana)
Published on

ಮಂಡ್ಯ: ಸರ್ಕಾರಗಳ ಅವೈಜ್ಞಾನಿಕ ನೀತಿಯಿಂದಾಗಿ ರೈತರು ಮತ್ತು ಕೃಷಿ ಕೂಲಿಕಾರ್ಮಿಕರ ಬದುಕು ಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂದ ರಾಜ್ಯ ಉಪಾಧ್ಯಕ್ಷ ಜೆ.ಎನ್.ನಾಗರಾಜು ಅಭಿಪ್ರಾಯಪಟ್ಟರು.

ನಗರದ ಕರ್ನಾಟಕ ಸಂಘದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಕೃಷಿ ಕೂಲಿಕಾರರ 5ನೇ ಜಿಲ್ಲಾ ಸಮ್ಮೇಳನದ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ‘ಕೃಷಿ ಬೆಳೆಯಲಿ ಕೂಲಿಕಾರರು ಉಳಿಯಲಿ, ಕೃಷಿಕರು ಮುನ್ನಡೆಯಲಿ’ ಎಂಬ ವಿಷಯ ಮಂಡಿಸಿ ಮಾತನಾಡಿದರು.

ಕೃಷಿ ಯಾಂತ್ರೀಕರಣಗೊಂಡ ನಂತರದಲ್ಲಿ ಕೃಷಿಕರ ಮತ್ತು ಕೂಲಿಕಾರ್ಮಿಕರ ಬದುಕು ಅತಂತ್ರಗೊಂಡಿದೆ. ಆದರೆ, ಕಾರ್ಪೊರೇಟ್ ಕುಳಗಳು ವಿಜೃಂಭಿಸುತ್ತಿದ್ದು, ಶ್ರಮಿಕರು ಅಧೋಗತಿಗೆ ಇಳಿಯುತ್ತಿದ್ದಾರೆ. ಸಂಟನೆಗಳು ರೈತರ ಪರ ಗಟ್ಟಿ ಧ್ವನಿ ಎತ್ತುವಲ್ಲಿ ವಿಲವಾಗುತ್ತಿದ್ದು, ಸಾಂಕೇತಿಕ ಪ್ರತಿಭಟನೆಗಷ್ಟೇ ಸೀಮಿತಗೊಳ್ಳುತ್ತಿರುವುದು ಬೇಸರದ ಸಂಗತಿ ಎಂದರು.

ಕೇಂದ್ರದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿಗೆ ಬಂದ ಜಾಗತೀಕರಣದಿಂದಾಗಿ ರೈತರು ಇಂದು ಸಾಕಷ್ಟು ಕಷ್ಟ ನಷ್ಟಗಳನ್ನು ಅನುಭವಿಸುವಂತಾಗಿದೆ. ಕೃಷಿ ನಾಶವಾಗುವಂತಹ ಸನ್ನಿವೇಶ ಕಣ್ಣೆದುರಿಗೆ ಬಂದು ನಿಂತಿದೆ. ಇಷ್ಟಾದರೂ ರೈತಪರ ಸಂಟನೆಗಳು ಸಾಂಕೇತಿಕ ಪ್ರತಿಭಟನೆಗಳಿಗಷ್ಟೇ ಸೀಮಿತಗೊಳ್ಳುತ್ತಿದ್ದು, ಕಳಕಳಿಯ ಮತ್ತು ಅಂತರಾಳದ ಪ್ರತಿಭಟನೆ ವ್ಯಕ್ತವಾಗುತ್ತಿಲ್ಲ. ದೆಹಲಿ ಪ್ರತಿಭಟನೆಯ ವೇಳೆ ಬಿಜೆಪಿಯೇತರ ಪಕ್ಷಗಳು ತಮ್ಮ ಜನರನ್ನು ಹೋರಾಟಕ್ಕಿಳಿಸಿದ್ದರೆ ರೈತ ವಿರೋಧಿ ನೀತಿಗಳಾವುವೂ ಅನುಷ್ಠಾನಗೊಳ್ಳಲು ಸಾಧ್ಯವೇ ಇರುತ್ತಿರಲಿಲ್ಲ. ಇಂತಹ ಸನ್ನಿವೇಶನದಲ್ಲಿ ಜನಪರ ಸಂಟನೆಗಳು ತಮ್ಮ ಹಿತರಕ್ಷಣೆಗೆ ಮುಂದಾಗದೆ ಮುಂದಾಗುವ ಅನಾಹುತದ ಎಚ್ಚರಿಕೆ ಅರಿತು ನಡೆಯಬೇಕಿದೆ ಎಂದು ಸಲಹೆ ನೀಡಿದರು.

ಪ್ರಾಂತ ಕೃಷಿ ಕೂಲಿಕಾರರ ಸಂದ ಜಿಲ್ಲಾಧ್ಯಕ್ಷ ಎಂ.ಪುಟ್ಟವಾದು, 25-30 ವರ್ಷಗಳ ಹಿಂದೆ ಕೂಲಿಕಾರರಿಗೆ ಕೃಷಿ ಬಿಟ್ಟರೆ ಬೇರೇನೂ ತಿಳಿದಿರಲಿಲ್ಲ. ಆಗಲೇ ಕೃಷಿಯೂ ಚೆನ್ನಾಗಿತ್ತು, ರೈತನ ಬದುಕೂ ಚೆನ್ನಾಗಿತ್ತು. ಆದರೆ, ಇಂದು ಕೃಷಿಯಲ್ಲಿ ಯಾಂತ್ರೀಕರಣ ಹೆಚ್ಚಾಗಿದ್ದು, ವಾಣಿಜ್ಯ ಕೃಷಿ ಮೇಳೈಸಿದೆ. ಹೆಚ್ಚೆಚ್ಚು ವಾರುಕಟ್ಟೆ ವ್ಯವಸ್ಥೆಯಾದರೂ ಕೂಡ ರೈತರ ಬದುಕು ವಾತ್ರ ದಿನೇ ದಿನೆ ಸೊರಗುತ್ತಿದೆ. ಇದಕ್ಕೆ ವಾಸ್ತವ ಕಾರಣ ಏನೆಂಬುದನ್ನು ಪತ್ತೆ ಹಚ್ಚಲು ಮತ್ತು ಅದಕ್ಕೆ ಪರಿಹಾರ ಒದಗಿಸಲು ಇದುವರೆಗೆ ನಮ್ಮನ್ನಾಳಿದ ಯಾವ ಸರ್ಕಾರಗಳೂ ಮುಂದಾಗಿಲ್ಲ ಎಂದು ದೂರಿದರು.

ರೈತರು ವ್ಯವಸಾಯದ ಜತೆ ಜೂಜಾಟ ಆಡುವಂತಹ ಪರಿಸ್ಥಿತಿಗೆ ಅನಿವಾರ್ಯವಾಗಿ ಸಿಲುಕಿದ್ದಾರೆ. ಬೆಳೆ ಆದರೆ ಆಯಿತು, ಇಲ್ಲದಿದ್ದರೆ ಇಲ್ಲ. ಬೆಳೆ ಬಂದರೆ ಬೆಲೆ ಸಿಗುವ ಖಾತ್ರಿ ಇಲ್ಲ. ಇಂತಹ ಸನ್ನಿವೇಶದಲ್ಲಿ ನಾವು ಪರ್ಯಾಯ ದಾರಿ ಕಂಡುಕೊಳ್ಳದಿದ್ದರೆ ಕೃಷಿ ಕೂಲಿಕಾರರ ಬದುಕು ಅತಂತ್ರವಾಗುತ್ತದೆ. ಈ ನಿಟ್ಟಿನಲ್ಲಿ ಈ ವಿಚಾರ ಸಂಕಿರಣದಲ್ಲಿ ಚರ್ಚಿಸಿ ಕೈಗೊಂಡ ನಿರ್ಣಯವನ್ನು ಸರ್ಕಾರಕ್ಕೆ ತಲುಪಿಸುವ ಕೆಲಸ ಅನಿವಾರ್ಯವಾಗಿದೆ ಎಂದು ಪ್ರತಿಪಾದಿಸಿದರು.

ಪ್ರಾಂತ ರೈತ ಸಂದ ಪ್ರಧಾನ ಕಾರ್ಯದರ್ಶಿ ಟಿ.ಯಶ್ವಂತ್, ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಜಾ.ದಳ ರೈತ ವಿಭಾಗದ ಕಾರ್ಯದರ್ಶಿ ಬಿಳಿಯಪ್ಪ, ಪ್ರ್ರೊ.ಹುಲ್ಕೆರೆ ಮಹದೇವು, ರವಿಕುವಾರ್, ಶಿವನಂಜಯ್ಯ, ಹನುಮೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net