ಪಾಂಡ್ಯ ಸಹೋದರರನ್ನು ಕ್ರಿಕೆಟ್​ಗೆ ಪರಿಚಯಿಸಿದ್ದು ಯಾರು ಗೊತ್ತೆ... ಕೃನಾಲ್ ಹೇಳ್ತಾರೆ ಕೇಳಿ

Krunal
Published on

ಮುಂಬೈ: ಆಲ್ರೌಂಡರ್​ಗಳಾದ ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಸಹೋದರರು ಭಾರತೀಯ ಕ್ರಿಕೆಟ್​ನಲ್ಲಿ ಈಗ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈ ಸಹೋದರರನ್ನು ಕ್ರಿಕೆಟ್​ನ ಪ್ರಮುಖ ವೇದಿಕೆಗೆ ಪರಿಚಯಿಸಿದ್ದು, ಟೀಮ್ ಇಂಡಿಯಾದ ಮಾಜಿ ಕೋಚ್ ಜಾನ್ ರೈಟ್. ಈ ವಿಷಯವನ್ನು ಕೃನಾಲ್ ಪಾಂಡ್ಯ ಬಹಿರಂಗಪಡಿಸಿದ್ದಾರೆ.

ಜಾನ್ ರೈಟ್ ಅವರಿಂದಾಗಿಯೇ ತಮಗೆ ಮುಂಬೈ ಇಂಡಿಯನ್ಸ್ ಪರ ಐಪಿಎಲ್​ನಲ್ಲಿ ಆಡುವ ಅವಕಾಶ ಲಭಿಸಿತು ಎಂದವರು ತಿಳಿಸಿದ್ದಾರೆ. ಸಿಕ್ಕ ಸರ್ಕಾರಿ ಉದ್ಯೋಗಕ್ಕೆ ಸೇರಿಕೊಳ್ಳುವಂತೆ ತಂದೆ ಸೂಚಿಸಿದ್ದರು. ಅದೇ ವೇಳೆ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಗಾಗಿ ಬರೋಡ ತಂಡದ ಆಯ್ಕೆ ಟ್ರಯಲ್ಸ್ ನಡೆಯುತ್ತಿತ್ತು. ಕ್ರಿಕೆಟಿಗನಾಗುವುದೇ ನನ್ನ ಕನಸಾಗಿತ್ತು. ಹೀಗಾಗಿ ಆ ಆಫರ್ ಲೆಟರ್ ಹರಿದು ಹಾಕಿ ಆಯ್ಕೆ ಟ್ರಯಲ್ಸ್​ಗೆ ಹೋಗಲು ನಿರ್ಧರಿಸಿದ್ದೆ. ಟ್ರಯಲ್ಸ್​ನಲ್ಲಿ ನಾನು ಉತ್ತಮ ನಿರ್ವಹಣೆ ತೋರಿದೆ. ಬರೋಡ ತಂಡಕ್ಕೆ ಆಯ್ಕೆಯೂ ಆದೆ. ಹಾರ್ದಿಕ್ ಆಗಲೇ ತಂಡದಲ್ಲಿದ್ದ. ಮುಂಬೈನಲ್ಲಿ ನಡೆದ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯಗಳ ವೇಳೆ ಜಾನ್ ರೈಟ್ ನಮ್ಮಿಬ್ಬರ ಆಟವನ್ನು ಕಂಡು ಪ್ರಭಾವಿತರಾದರು. ಆಗ ಮುಂಬೈ ಇಂಡಿಯನ್ಸ್ ತಂಡದ ಕೋಚ್ ಆಗಿದ್ದ ಜಾನ್ ರೈಟ್ ಶಿಫಾರಸು ಮಾಡಿದ್ದರು. ಇದರಿಂದ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೇರ್ಪಡೆಗೊಂಡೆವು. ಅಲ್ಲಿಂದ ನಂತರ ನಮ್ಮ ಬದುಕೇ ಬದಲಾಯಿತು’ ಎಂದು ಕೃನಾಲ್ ಪಾಂಡ್ಯ ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net