'ರಿಲೇಷನ್​ಷಿಪ್​ನಲ್ಲಿ ಜಗಳ ಸಾಮಾನ್ಯ': ನಟಿ ಕೃತಿಸನನ್ ಹೀಗೆನ್ನಲು ಕಾರಣ ಇದೇ ನೋಡಿ..

krithi
Published on

ಮುಂಬೈ: 'ನಾನು ಸಂಬಂಧವನ್ನು ಮುರಿದುಕೊಳ್ಳಲು ಇಷ್ಟ ಪಡುವುದಿಲ್ಲ, ಬದಲಾಗಿ ಅದನ್ನು ಗೌರವಿಸುತ್ತೇನೆ' ಎಂದು ನಟಿ ಕೃತಿಸನನ್ ಹೇಳಿದ್ದಾರೆ.

ರಿಲೇಷನ್​ ಷಿಪ್​ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿ, ಬಂಧ ಯಾವುದೇ ಇರಲಿ, ಅದನ್ನು ನಾನು ಗೌರವಿಸುತ್ತೇನೆ. ರಿಲೇಷನ್​ಷಿಪ್ ನಲ್ಲಿ ಸಣ್ಣಪುಟ್ಟ ವ್ಯತ್ಯಾಸ, ಜಗಳ ಬರುವುದು ಸಾಮಾನ್ಯ. ಹೀಗಾದರೆ ಮೊದಲು ಸಂಗಾತಿಗೆ ಕ್ಷಮೆ ಹೇಳಲು ನಾನು ಹಿಂಜರಿಯುವುದಿಲ್ಲ ಎಂದರು.

ಇನ್ನು ನನ್ನ ತಪ್ಪು ಇಲ್ಲದಿದ್ದರೆ ಕ್ಷಮಿಸಿ ಎಂದು ನಾನು ಹೇಳುವುದಿಲ್ಲ. ಆದರೆ ಮನಸ್ತಾಪವನ್ನು ಹೇಗಾದರೂ ಪರಿಹರಿಸಬೇಕು ಎಂಬ ನಿಟ್ಟಿನಲ್ಲಿ ಯೋಚಿಸುತ್ತೇನೆ. ಅದನ್ನು ಹಾಗೆಯೇ ಮುಂದುವರಿಸಲು ನಾನು ಬಯಸುವುದಿಲ್ಲ. ಸಮಸ್ಯೆಯನ್ನು ಅಲ್ಲಿಗೇ ಬಿಟ್ಟುಬಿಡಲು ಇಚ್ಚಿಸುತ್ತೇನೆ. ಎಂದು ಕೃತಿಸನನ್ ಹೇಳಿದರು.

ಸಮಸ್ಯೆಗಳು ಬಂದಾಗ ನೀವು ಕಣ್ಣೀರು ಸುರಿಸುತ್ತೀರಾ ಎಂಬ ಪ್ರಶ್ನೆಗೆ ನಾನು ಅಳುವುದಿಲ್ಲ ಎಂದು ಹೇಳುವುದಿಲ್ಲ. ಎಲ್ಲದಕ್ಕೂ ನಾನು ಅಳುವುದಿಲ್ಲ. ನೋವು ಸಹಿಸಲಾಗದೆ ಹೋದಾಗ ಅಳುವ ಸಂದರ್ಭಗಳಿವೆ ಎಂದು ಹೇಳಿದರು.

ಸಿನಿಮಾದಲ್ಲಿ ಮುಂದುವರಿಯುವ ಆಸೆ ಇದೆ. ಆದರೆ ಇದೇ ಕ್ಷೇತ್ರದಲ್ಲಿಯೇ ಮುಂದುವರಿಯುವ ಗುರಿ ಇಲ್ಲ. ತನ್ನ ಜೀವನವನ್ನು ಬ್ಯುಸಿಯಾಗಿರಿಸುವುದರಲ್ಲೇ ನಿಜವಾದ ಸಂತೋಷ ನೀಡುತ್ತದೆ ಎಂದು ಹೇಳಿದರು.

ಕೃತಿಸನನ್ ದಕ್ಷಿಣದ ಭಾಷೆಗಳಲ್ಲಷ್ಟೇ ಅಲ್ಲದೆ ಬಾಲಿವುಡ್‌ನಲ್ಲೂ ಸರಣಿ ಯೋಜನೆಗಳನ್ನು ಮಾಡಿದರು. 2021 ರಲ್ಲಿ ಬಿಡುಗಡೆಯಾದ 'ಮಿಮಿ' ಗಾಗಿ ಅವರು ಅತ್ಯುತ್ತಮ ನಟಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net