'ತಂತ್ರಜ್ಞಾನವನ್ನು ದೂಷಿಸುವುದು ಸರಿಯಲ್ಲ'.. ಡೀಪ್ ಫೇಕ್ ಬಗ್ಗೆ ಕೃತಿ ಸನನ್ ಕಾಮೆಂಟ್

kruthi
Published on

ಮುಂಬೈ: ಶಾಹಿದ್ ಕಪೂರ್ ಮತ್ತು ಕೃತಿ ಸನೋನ್ ಅಭಿನಯದ ತೇಡಿ ಬಾಥೋ ಮೈ ಐಸಾ ಉಲ್ಟಾ ಜಿಯಾ ಚಿತ್ರವನ್ನು ಅಮಿತ್ ಜೋಶಿ ಮತ್ತು ಆರಾಧನಾ ಸಾಹ್ ನಿರ್ದೇಶಿಸಿದ್ದಾರೆ. ಫೆಬ್ರವರಿ 9 ರಂದು ತೆರೆಗೆ ಬರಲಿದೆ. ಈ ಸಿನಿಮಾದ ಪ್ರಚಾರದ ಭಾಗವಾಗಿ ನೀಡಿದ ಸಂದರ್ಶನದಲ್ಲಿ ಇಬ್ಬರೂ ಡೀಪ್ ಫೇಕ್ ಬಗ್ಗೆ ಮಾತನಾಡಿದ್ದಾರೆ.

'ಸೆಲೆಬ್ರಿಟಿಗಳ ಮಾರ್ಫಿಂಗ್ ವಿಡಿಯೋಗಳು ಕೆಲವು ತಿಂಗಳುಗಳಿಂದ ಸಂಚಲನ ಮೂಡಿಸುತ್ತಿವೆ. ಕೃತಕ ಬುದ್ಧಿಮತ್ತೆ ಬಳಸಿ ಮಾಡಿದ ವೀಡಿಯೋಗಳಿಂದ ಹಲವರು ಇನ್ನಿಲ್ಲದ ಮುಜುಗರ ಮತ್ತು ಮನೋವೇದನೆ ಅನುಭವಿಸಿದ್ದನ್ನು ನೋಡಿದ್ದೇವೆ. ಆದರೆ ಇದಕ್ಕೆ ಪ್ರತಿಕ್ರಿಯಿಸಿದ ನಟಿ ಕೃತಿ ಸನನ್ ಇದು ತುಂಬಾ ಆತಂಕಕಾರಿಯಾಗಿದೆ. ಡೀಪ್​ಫೇಕ್​ಗಳಿಗೆ ತಂತ್ರಜ್ಞಾನವನ್ನು ದೂಷಿಸುವುದು ತಪ್ಪು, ಅದರಿಂದ ಅನೇಕ ಪ್ರಯೋಜನಗಳಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಎಐ ಸಹ ಮಾನವರಿಂದ ರಚಿಸಲ್ಪಟ್ಟಿದೆ ಎಂದು ನೆನಪಿನಲ್ಲಿಡಬೇಕು. ತಂತ್ರಜ್ಞಾನದ ಬೆಳವಣಿಗೆಯನ್ನು ನೋಡಿದರೆ ಭವಿಷ್ಯದಲ್ಲಿ ಎಐ ನಮ್ಮ ಜೀವನದೊಂದಿಗೆ ಹಾಸುಹೊಕ್ಕಾಗುವ ಸಾಧ್ಯತೆ ದಟ್ಟವಾಗಿದೆ ಎಂದು ಕೃತಿ ಸನನ್ ಹೇಳಿದ್ದಾರೆ.

ಇನ್ನು ತೇಡಿ ಬಾಥೋ ಮೈ ಐಸಾ ಉಲ್ಟಾ ಜಿಯಾ ಚಿತ್ರದ ಬಗ್ಗೆ ಮಾತನಾಡುತ್ತಾ.. 'ಮೊದಲ ಬಾರಿಗೆ ಈ ಕಥೆ ಕೇಳಿದಾಗ ಇದೊಂದು ಸುಂದರ ಪ್ರೇಮಕಥೆ ಹೊಂದಿದ್ದು, ಹೇಗೆ ಪ್ರೇಕ್ಷಕರನ್ನು ಮೆಚ್ಚಿಸುತ್ತದೆ? ಎನಿಸಿತು. ಇದರಲ್ಲಿ ಇಬ್ಬರು ನಾಯಕಿಯರ ನಡುವಿನ ಕೆಮಿಸ್ಟ್ರಿ ಚೆನ್ನಾಗಿದೆ ಎಂದು ನಾನು ಭಾವಿಸಿದೆ. ಆದರೆ ನನ್ನ ಪಾತ್ರ ರೋಬೋ ಎಂದು ತಿಳಿದಾಗ ಅಚ್ಚರಿಯಾಯಿತು.ಸಿಪ್ರಾ ಎಂಬ ರೋಬೋ ಪಾತ್ರದಲ್ಲಿ ನಾನು ಮಾಡಿದ ಕಿಡಿಗೇಡಿತನ ಸಾಮಾನ್ಯವಲ್ಲ' ಎಂದು ತಮ್ಮ ಪಾತ್ರದ ಬಗ್ಗೆ ಬಹಿರಂಗಪಡಿಸಿದ್ದಾರೆ.

ಕಠಿಣ ಶಿಕ್ಷೆಯಾಗಬೇಕು: ಮತ್ತೊಬ್ಬ ಬಾಲಿವುಡ್ ನಟಿ ಭೂಮಿ ಪೆಡ್ನೇಕಾ ಕೂಡ ಸಂದರ್ಶನವೊಂದರಲ್ಲಿ ನಕಲಿ ವಿಡಿಯೋಗಳ ಬಗ್ಗೆ ಮಾತನಾಡಿದ್ದಾರೆ. ಇಂತಹ ಕೃತ್ಯ ಎಸಗುವವರಿಗೆ ಕಠಿಣ ಶಿಕ್ಷೆಯಾಗಬೇಕು. ಅಂತಹ ನಮ್ಮ ಫೋಟೋಗಳನ್ನು ನೋಡಿದಾಗ ಎಷ್ಟು ದುಃಖವಾಗುತ್ತದೆ ಎಂದು ನಾನು ಊಹಿಸಲು ಸಾಧ್ಯವಿಲ್ಲ. ಇಂತಹ ಘಟನೆಗಳು ಮರುಕಳಿಸದಂತೆ ಕೂಡಲೇ ವಿಶೇಷ ಕಾನೂನುಗಳನ್ನು ತಂದು ಜಾರಿಗೊಳಿಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net