ಸಿನಿಮಾ ಅವಕಾಶಕ್ಕಾಗಿ ನಿರ್ಮಾಪಕರಿಗೆ ಆಫರ್ ಕೊಟ್ಟ ಕೃತಿ ಶೆಟ್ಟಿ

krithi shetty (1)
Published on

ನವದೆಹಲಿ: ಸಿನಿಮಾವೊಂದರ ಮೂಲಕ ರಾತ್ರೋರಾತ್ರಿ ಕೃತಿ ಶೆಟ್ಟಿ ಸ್ಟಾರ್ ನಟಿ ಆದರು. ಸತತ ಗೆಲುವಿನೊಂದಿಗೆ ಹ್ಯಾಟ್ರಿಕ್ ಪಡೆದಿದ್ದ ನಟಿ ಅಷ್ಟೇ ವೇಗವಾಗಿ ಇವರಿಗೆ ಅವಕಾಶಗಳು ಕಡಿಮೆಯಾದವು. ಈ ಹಿನ್ನೆಲೆಯಲ್ಲಿ ನಿರ್ಮಾಪಕರಿಗೆ ನಟಿ ಬಂಪರ್ ಆಫರ್ ನೀಡುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

ಉಪ್ಪೇನ ಸಿನಿಮಾ ಒಂದು ಸೆನ್ಸೇಷನ್. ಹೊಸ ನಿರ್ದೇಶಕ ಬುಚ್ಚಿಬಾಬು ಸನಾ ಅವರು ಮೆಗಾ ಹೀರೋ ವೈಷ್ಣವ್ ತೇಜ್ ಅವರನ್ನು ಪರಿಚಯಿಸುವ ಮೂಲಕ ಸದ್ದು ಮಾಡಿದರು. ಯುವ ಭಾವನಾತ್ಮಕ ಪ್ರೇಮ, ಉಪ್ಪೇನ ಬ್ಲಾಕ್ಬಸ್ಟರ್ ಹಿಟ್ ಆಯಿತು. ಆ ಸಿನಿಮಾದ ಯಶಸ್ಸಿನಲ್ಲಿ ನಾಯಕಿ ಕೃತಿ ಶೆಟ್ಟಿಗೆ ಬೇಡಿಕೆ ಹೆಚ್ಚಾಯಿತ್ತು. ಸಾಲುಸಾಲು ಸಿನಿಮಾ ಅವಕಾಶಗಳು ಬಂದವು.

ಸತತ ಯಶಸ್ಸಿನ ಹಿನ್ನೆಲೆಯಲ್ಲಿ ಸಂಭಾವನೆ ಹೆಚ್ಚಿಸಕೊಂಡ ನಟಿ. ಬಂಗಾರರಾಜು ಚಿತ್ರದ ನಂತರ ಆಕೆ ಸಿನಿಮಾಗಳೂ ಹಿಟ್ ಆಗಲಿಲ್ಲ. ನಾಗ ಚೈತನ್ಯ ಜೋಡಿಯಾಗಿ ನಟಿಸಿದ್ದ ಕಸ್ಟಡಿ ಚಿತ್ರಕ್ಕೆ ಭಾರೀ ನಿರೀಕ್ಷೆಯಿತ್ತು, ಆದರೆ ಅದು ನಿರಾಸೆ ಮೂಡಿಸಿತ್ತು. ಅದೇ ಸಮಯದಲ್ಲಿ ಶ್ರೀಲೀಲಾ ಟಾಲಿವುಡ್ ಪ್ರವೇಶಿಸಿ ಕೃತಿ ಶೆಟ್ಟಿಗೆ ತೀವ್ರ ಪೈಪೋಟಿ ನೀಡಿದರು. ಎಲ್ಲಾ ಆಫರ್‌ಗಳನ್ನು ತೆಗೆದುಕೊಂಡರು. ಟಾಲಿವುಡ್ ನಲ್ಲಿ ಕೃತಿ ಶೆಟ್ಟಿಗೆ ಸಂಕಷ್ಟ ಶುರುವಾಗಿತ್ತು.

ಸದ್ಯ ತೆಲುಗಿನಲ್ಲಿ ಶರ್ವಾನಂದ್ ಜತೆ ಸಿನಿಮಾ ಮಾಡುತ್ತಿದ್ದಾರೆ. ಮಲಯಾಳಂ ಮತ್ತು ತಮಿಳಿನಲ್ಲಿ ಎರಡು ಆಫರ್‌ಗಳಿವೆ. ಹೇಗಾದರೂ ಮಾಡಿ ತೆಲುಗಿನಲ್ಲಿ ಗಟ್ಟಿಯಾಗಿ ಉಳಿಯಬೇಕು ಎಂಬುದು ಕೃತಿ ಪ್ಲಾನ್. ಶ್ರೀಲೀಲಾ ಕೂಡ ಸತತ ಸೋಲುಗಳಿಂದ ಸಂಕಷ್ಟಕ್ಕೆ ಸಿಲುಕಿದ್ದರು. ಈ ಕ್ರಮದಲ್ಲಿ ಕೃತಿ ಶೆಟ್ಟಿ ನಿರ್ಮಾಪಕರಿಗೆ ಬಂಪರ್ ಆಫರ್ ನೀಡಿದ್ದಾರೆ.

ಈ ಹಿಂದೆ ರೂ. 2 ಕೋಟಿಗೆ ಬೇಡಿಕೆ ಇಟ್ಟಿರುವ ಕೃತಿ ಶೆಟ್ಟಿ ಒಂದೂವರೆ ಕೋಟಿ ಕೊಟ್ಟರೂ ಓಕೆ ಎನ್ನುತ್ತಿದ್ದಾರೆ. ಜೊತೆಗೆ ಗ್ಲಾಮರಸ್ ಪಾತ್ರಗಳಿಗೂ ತಯಾರು ಎಂದು ಹೇಳುತ್ತಿದ್ದಾರೆ. ಅಷ್ಟರ ಮಟ್ಟಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯೊಂದು ವೈರಲ್ ಆಗುತ್ತಿದೆ. ಕೃತಿ ಶೆಟ್ಟಿಯ ಆಫರ್ ಅನ್ನು ನಿರ್ಮಾಪಕರು ಎಷ್ಟರ ಮಟ್ಟಿಗೆ ಬಳಸಿಕೊಳ್ಳುತ್ತಾರೋ ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net