More

    ದಯವಿಟ್ಟು ಗಂಡ, ಹೆಂಡ್ತಿ ಒಟ್ಟಿಗೆ ಸ್ನಾನ ಮಾಡಿ; ನೀರು ಉಳಿಸಲು ಮೇಯರ್‌ ಕೊಟ್ರು ಈ ಸಲಹೆ

    ಬೊಗೋಟಾ: ಹವಾಮಾನ ಬದಲಾವಣೆಯಿಂದ ಸರಿಯಾದ ಸಮಯಕ್ಕೆ ಮಳೆ ಬೀಳುತ್ತಿಲ್ಲ. ಪರಿಣಾಮವಾಗಿ  ಎಲ್ಲೆಡೆ ಬರ ಆವರಿಸಿದೆ.  ಬೆಂಗಳೂರು ನಗರದ ಜನರು ಈಗಾಗಲೇ ನೀರಿನ ಸಮಸ್ಯೆ ಎದುರಿಸಲು ಆರಂಭಿಸಿದ್ದಾರೆ. ತೋಟಗಾರಿಕೆ ಅಥವಾ ಕಾರು ತೊಳೆಯಲು ನೀರು ಬಳಸಿದರೆ ಅಧಿಕಾರಿಗಳು ದಂಡ ವಿಧಿಸುತ್ತಿದ್ದಾರೆ. ಬೇಸಿಗೆ ಸಮೀಪಿಸುತ್ತಿದ್ದಂತೆ ಹಲವೆಡೆ ನೀರಿನ ಸಮಸ್ಯೆ ಶುರುವಾಗಿದೆ. ನಮ್ಮ ದೇಶದಲ್ಲಷ್ಟೇ ಅಲ್ಲ, ಕೊಲಂಬಿಯಾದ ರಾಜಧಾನಿ ಬೊಗೊಟಾದ ಜನರಿಗೆ ನೀರಿನ ಸಮಸ್ಯೆ ಶುರುವಾಗಿದೆ. ಹೀಗಾಗಿ ಬೊಗೋಟಾ ಮೇಯರ್​ ಒಬ್ಬರು ನೀರಿನ ಮಿತ ಬಳಕೆಗೆ ಸಲಹೆ ನೀಡಿದ್ದಾರೆ.

    ಜಲಾಶಯಗಳು ಬತ್ತಿ ಹೋಗುತ್ತಿವೆ. ಜಲಾಶಯಗಳಲ್ಲಿ ನೀರಿನ ಮಟ್ಟ ಸಾರ್ವಕಾಲಿಕ ಕನಿಷ್ಠ ಮಟ್ಟ ತಲುಪಿದೆ. ಈ ಅನುಕ್ರಮದಲ್ಲಿ, ಬೊಗೋಟಾ ಮೇಯರ್ ಕಾರ್ಲೋಸ್ ಫರ್ನಾಂಡೋ ಗ್ಯಾಲನ್ ನೀರನ್ನು ಉಳಿಸಲು ಹಲವಾರು ಸಲಹೆಗಳನ್ನು ನೀಡಿದರು.

    ದಂಪತಿ ಒಟ್ಟಿಗೆ ಸ್ನಾನ ಮಾಡಬೇಕು. ಇದರಿಂದ ಹೆಚ್ಚು ನೀರು ಉಳಿತಾಯವಾಗುತ್ತದೆ. ಇದಲ್ಲದೆ, ಜನರು ಭಾನುವಾರ ಅಥವಾ ವಾರದ ಯಾವುದೇ ದಿನ ಮನೆಯಿಂದ ಹೊರಗೆ ಹೋಗದಿದ್ದರೆ ಸ್ನಾನ ಮಾಡುವುದನ್ನು ಆದಷ್ಟು ತಪ್ಪಿಸಿ. ನೀರಿನ ಸಮಸ್ಯೆಯ ಹಿನ್ನೆಲೆಯಲ್ಲಿ ಒಂದು ಹನಿ ನೀರು ವ್ಯರ್ಥವಾಗದಂತೆ ಇನ್ನೂ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

    ಬೊಗೊಟಾದ ಮೇಯರ್ ಫರ್ನಾಂಡೊ ಗ್ಯಾಲನ್  ನೀಡಿದ ಈ ಸಲಹೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಕೆಲವರು ಇವರಿಗೆ ಬೆಂಬಲ ನೀಡುತ್ತಿದ್ದರೆ ಇನ್ನು ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.

    ಹವಾಮಾನ ಬದಲಾವಣೆ  ಕಡಿಮೆ ಮಳೆಗೆ ಕಾರಣವಾಯಿತು. ಆದರೆ ತಾಪಮಾನ ಹೆಚ್ಚಾಗಿರುವುದರಿಂದ ಹೆಚ್ಚಿನ ಪ್ರಮಾಣದ ನೀರು ಆವಿಯಾಗುವುದರಿಂದ ಜಲಾಶಯಗಳಲ್ಲಿ ನೀರಿನ ಮಟ್ಟ ಅತ್ಯಂತ ಕಡಿಮೆ ಮಟ್ಟಕ್ಕೆ ತಲುಪಿದೆ. ಇದರಿಂದಾಗಿ ಜಗತ್ತಿನ ಹಲವೆಡೆ ನೀರಿನ ಸಮಸ್ಯೆ ತಲೆದೋರಿದೆ.

    ನಟ ಸಲ್ಮಾನ್​ ಖಾನ್ ಮನೆ ಮುಂದೆ ಗುಂಡಿನ ದಾಳಿ; ಬಿಗಿ ಬಂದೋಬಸ್ತ್‌

    ನಾನು ಅವನನ್ನು ಪ್ರೀತಿಸಿ ಮೋಸ ಹೋದೆ, ಕೆಲವು ನಟರು ನನ್ನ ಜತೆ ಕಂಫರ್ಟಬಲ್ ಆಗಲ್ಲ ಅಂತಾರೆಂದು ಕಣ್ಣೀರಿಟ್ಟ ವಿದ್ಯಾ ಬಾಲನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts