ಸಾಯಿಬಾಬಾ ಪ್ರಾರ್ಥನಾ ಮಂದಿರದ ವಾರ್ಷಿಕೋತ್ಸವ

10 KRN-1
Published on

ಕೆ.ಆರ್.ನಗರ: ಪಟ್ಟಣದ ಆಂಜನೇಯ ಬಡಾವಣೆಯಲ್ಲಿರುವ ಸಾಯಿಬಾಬಾ ಪ್ರಾರ್ಥನಾ ಮಂದಿರದ ವಾರ್ಷಿಕೋತ್ಸವ ವಿಜೃಂಭಣೆಯಿಂದ ನಡೆಯಿತು.
ವಾರ್ಷಿಕೋತ್ಸವ ಅಂಗವಾಗಿ ಮಂದಿರಕ್ಕೆ ಹೂವಿನ ಅಲಂಕಾರ ಮಾಡಲಾಗಿತ್ತು. ಬೆಳಗ್ಗೆ ಮೂರ್ತಿಗೆ ನಾನಾ ಬಗೆಯ ಅಭಿಷೇಕ, ನವಗ್ರಹ ಪೂಜೆ ಹಾಗೂ ಹೋಮ-ಹವನ ನಡೆಸಲಾಯಿತು. ಬಳಿಕ ಸಾಯಿಬಾಬಾರ ಉತ್ಸವ ಮೂರ್ತಿಯನ್ನು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು. ಮಂದಿರದ ಆವರಣದಲ್ಲಿ ಭಕ್ತರಿಗೆ ಅನ್ನದಾಸೋಹ ನಡೆಯಿತು.
ಜಿಪಂ ಸದಸ್ಯ ಡಿ.ರವಿಶಂಕರ್, ನವನಗರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ಪುರಸಭೆ ಸದಸ್ಯರಾದ ಮಂಜುಳಾ ಚಿಕ್ಕವೀರು, ಕೆ.ಜಿ.ಸುಬ್ರಮಣ್ಯ, ಮಾಜಿ ಉಪಾಧ್ಯಕ್ಷ ನಟರಾಜು, ಮಾಜಿ ಸದಸ್ಯ ಎಸ್.ಯೋಗಾನಂದ, ಉಪಾಧ್ಯಕ್ಷೆ ವಿಜಯಲಕ್ಷ್ಮೀ, ಕಾರ್ಯದರ್ಶಿ ಮುದ್ದುಕೃಷ್ಣ, ಖಜಾಂಚಿ ಚಿಕ್ಕವೀರು, ನಿರ್ದೇಶಕರಾದ ಕೆ.ಎಂ.ನಾರಾಯಣ್, ಪ್ರಭಾಕರನ್, ಯೋಗೀಶ್‌ಕುಮಾರ್, ನಾಗರತ್ನ, ಸರ್ವಮಂಗಳ, ಶಾರದಮ್ಮ, ದಯಾನಂದ, ಕೆ.ಎನ್.ರವಿ, ಆರ್.ರಮೇಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net