

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ ಉಳಿಕೆ ಮೂಲ ವೃಂದ ಹಾಗೂ ಹೈ-ಕ ವೃಂದದ ಗ್ರೂಪ್ ಎ ತಾಂತ್ರಿಕ ಮತ್ತು ಗ್ರೂಪ್ ಬಿ ತಾಂತ್ರಿಕ/ ತಾಂತ್ರಿಕೇತರ ವೃಂದದ ತಾಂತ್ರಿಕ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿ ಆಹ್ವಾನಿಸಿದೆ.
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ, ಪೌರಾಡಳಿತ ನಿರ್ದೇಶನಾಲಯದ ನಗರ ಸ್ಥಳೀಯ ಸಂಸ್ಥೆಗಳು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಸೇರಿ ವಿವಿಧ ಇಲಾಖೆಗಳಲ್ಲಿ ಒಟ್ಟು 251 ಹುದ್ದೆಗಳಿವೆ.
ವಿದ್ಯಾರ್ಹತೆ, ವಯೋಮಿತಿ, ಅರ್ಜಿಶುಲ್ಕ, ಆಯ್ಕೆ ವಿಧಾನ ಇತ್ಯಾದಿ ವಿವರಗಳಿಗೆ ಕೆಪಿಎಸ್ಸಿ ವೆಬ್ಸೈಟ್ನಲ್ಲಿರುವ ಅಧಿಕೃತ ಅಧಿಸೂಚನೆ ನೋಡಬಹುದು.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಜುಲೈ 10 ರಿಂದ ಆಗಸ್ಟ್ 10ರ ವರೆಗೆ ಆನ್ಲೈನ್ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗೆ ಕೆಪಿಎಸ್ಸಿ ವೆಬ್ಸೈಟ್ http://www.kpsc.kar.nic.in ನೋಡಬಹುದು. ‘