More

    ಬಂತು ಇ-ಬ್ಲಡ್ ಸರ್ವೀಸಸ್ ಆ್ಯಪ್… ಜೀವ ರಕ್ಷಕ ರಕ್ತದ ಲಭ್ಯತೆಯನ್ನು ಪರಿಶೀಲಿಸುವುದು ಇನ್ನೂ ಸುಲಭ

    ನವದೆಹಲಿ: ರಕ್ತದ ಭಂಡಾರಗಳಲ್ಲಿ ರಕ್ತದ ಲಭ್ಯತೆಯನ್ನು ಪರಿಶೀಲಿಸಲು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಗುರುವಾರ ಇ-ಬ್ಲಡ್ ಸರ್ವೀಸಸ್ ಆ್ಯಪ್ ಅನ್ನು ಬಿಡುಗಡೆ ಮಾಡಿದ್ದಾರೆ.
    ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಉಪಕ್ರಮ ಇದಾಗಿದ್ದು, ಅಗತ್ಯವಿರುವವರಿಗೆ ನಾಲ್ಕು ಯೂನಿಟ್ ವರೆಗೂ ರಕ್ತವನ್ನು ಆರ್ಡರ್ ಮಾಡಲು ಈ ಅಪ್ಲಿಕೇಶನ್ ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ.

    ಇದನ್ನೂ ಓದಿ: ಬೃಹತ್ ಚಂಡಮಾರುತ ಆಕಾಶದಲ್ಲಿ ಕತ್ತಲೆಯನ್ನೇ ಸೃಷ್ಟಿಸಿತು

    ಅಗತ್ಯವಿರುವವರು ಅಪ್ಲಿಕೇಶನ್‌ನಲ್ಲಿ ಹೆಸರು ನೋಂದಾಯಿಸಬಹುದು. ಆ ಮೂಲಕ ಅವರಿಗೆ ರಕ್ತ ಎಲ್ಲಿ ಸಿಗುತ್ತದೆ ಎಂಬುದನ್ನು ತಿಳಿಯಬಹುದು ಮತ್ತು ಅಗತ್ಯವಿರುವವರಿಗೆ ನಾಲ್ಕು ಯೂನಿಟ್ ರಕ್ತವನ್ನು ಸಹ ಆರ್ಡರ್ ಮಾಡಬಹುದು.
    ಈ ಅಪ್ಲಿಕೇಶನ್ ಅನ್ನು ಇ-ರಕ್ತಕೋಶ್ ಅಭಿವೃದ್ಧಿಪಡಿಸಿದ್ದು, ಇದು ರಕ್ತದಾನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರುವ ನಿರೀಕ್ಷೆಯಿದೆ.

    ಈ ಕರೊನಾದ ಸಂಕಷ್ಟ ಸಮಯದಲ್ಲಿ ರಕ್ತದಾನ ಮಾಡುವುದನ್ನು ಮುಂದುವರಿಸುವಂತೆ ಸ್ವಯಂಪ್ರೇರಿತ ರಕ್ತದಾನಿಗಳಿಗೆ ಅವರು ಕರೆ ನೀಡಿದರು. ” ಈ ಅಪ್ಲಿಕೇಶನ್ ನಿರ್ಗತಿಕರಿಗೆ ವರದಾನವಾಗಿ ಕಾರ್ಯನಿರ್ವಹಿಸುತ್ತದೆ. ಭಾರತೀಯ ರೆಡ್​​ಕ್ರಾಸ್ ಸಂಸ್ಥೆ ಯಾವಾಗಲೂ ವಿವಿಧ ಆರೋಗ್ಯ ಕಾರ್ಯಕ್ರಮಗಳಲ್ಲಿ ಸರ್ಕಾರಕ್ಕೆ ಸಹಾಯ ಮಾಡಿದೆ. ಕರೊನಾ ಸಂಕಷ್ಟದಲ್ಲಿ ಅದು ಮಾಡಿದ ಈ ಪ್ರಯತ್ನವನ್ನು ನಾನು ಶ್ಲಾಘಿಸುತ್ತೇನೆ. ಅಗತ್ಯವಿರುವವರು ಈಗ ಸುಲಭವಾಗಿ ರಕ್ತವನ್ನು ಪಡೆಯಬಹುದು ಎಂದು ಹರ್ಷವರ್ಧನ್ ಟ್ವೀಟ್ ನಲ್ಲಿ ಹೇಳಿದ್ದಾರೆ.

    ಇದನ್ನೂ ಓದಿ: ಆಕೆಗೆ ಬಯಲಲ್ಲೇ ಹೆರಿಗೆಯಾಯ್ತು… ಆದರೆ ಮಗು ಏನಾಯ್ತು?

    ಇ-ಬ್ಲಡ್ ಸರ್ವೀಸಸ್ ಮೊಬೈಲ್ ಅಪ್ಲಿಕೇಶನ್ ಸುಲಭವಾಗಿ ಬಳಸಬಹುದಾದ ವೈಶಿಷ್ಟ್ಯಗಳನ್ನು ಹೊಂದಿದ್ದು ಸುಲಭವಾಗಿ ರಕ್ತವನ್ನು ಪಡೆಯಲು ಸಹಾಯವಾಗುತ್ತದೆ ಎಂದು ಹರ್ಷ್ ವರ್ಧನ್ ತಿಳಿಸಿದ್ದಾರೆ.

    ಮಾಜಿ ಕ್ರಿಕೆಟಿಗ ರಾಬಿನ್ ಸಿಂಗ್ ಕಾರು ಜಪ್ತಿ ಮಾಡಿದ ಚೆನ್ನೈ ಪೊಲೀಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts