ಬೃಹತ್ ಚಂಡಮಾರುತ ಆಕಾಶದಲ್ಲಿ ಕತ್ತಲೆಯನ್ನೇ ಸೃಷ್ಟಿಸಿತು

Storm JPG 2
Published on

ಚುರು: ಗುರುವಾರ ಭಾರಿ ಧೂಳಿನಿಂದ ಕೂಡಿದ ಚಂಡಮಾರುತ ರಾಜಸ್ತಾನದ ಚುರು ಮೇಲೆ ಅಬ್ಬರಿಸಿದೆ.

ಇಲ್ಲಿ ಬೀಸಿದ ಚಂಡಮಾರುತ ಆಕಾಶವನ್ನು ಕಪ್ಪಾಗಿಸುತ್ತಿರುವುದು ವಿಡಿಯೋ ದೃಶ್ಯಾವಳಿಯಲ್ಲಿದೆ.

ಬೃಹತ್ ಕಿತ್ತಳೆ ಬಣ್ಣದ ಮೋಡಗಳು ಧೂಳಿನಿಂದ ಕೂಡಿದ ಆಕಾಶದಲ್ಲಿ ದೈತ್ಯ ಕೆಂಪು ಮೋಡಕ್ಕೆ ಅಪ್ಪಳಿಸುವ ಮೊದಲು ನಗರದ ಮೇಲೆ ತೇಲುತ್ತಿರುವಂತೆ ಕಾಣುತ್ತದೆ.

ಇದು ಅನೇಕರಿಗೆ ಉಸಿರಾಟದ ತೊಂದರೆ ಉಂಟುಮಾಡುವ ಸಾಧ್ಯತೆಯಿದ್ದರೂ ಇದುವರೆಗೆ ಯಾವುದೇ ಸಾವುನೋವುಗಳು ಸಂಭವಿಸಿದ ವರದಿಯಾಗಿಲ್ಲ. ಚುರು ಥಾರ್ ಮರುಭೂಮಿಗೆ ಹತ್ತಿರದಲ್ಲಿದೆ.

ಜೈಪುರ ಹವಾಮಾನ ಇಲಾಖೆ ಪ್ರಕಾರ ಚುರು, ಜುಂಜುರು, ಸಿಕಾರ್, ನಾಗೌರ್, ಜೈಪುರ, ಅಲ್ವಾರ್, ಅಜ್ಮೀರ್ ಜಿಲ್ಲೆಗಳು ಮತ್ತು ರಾಜಸ್ತಾನದ ಹತ್ತಿರದ ಪ್ರದೇಶಗಳಲ್ಲಿ ಚಂಡಮಾರುತ ಸಂಭವಿಸುವ ಸಾಧ್ಯತೆ ಇದೆ.

ಜಮ್ಮು ಮತ್ತು ಕಾಶ್ಮೀರ, ಲಡಾಖ್, ಹಿಮಾಚಲ ಪ್ರದೇಶ, ಉತ್ತರಾಖಂಡ್, ಪಂಜಾಬ್, ಹರಿಯಾಣ, ದೆಹಲಿ, ಪೂರ್ವ ಉತ್ತರ ಪ್ರದೇಶ, ಪೂರ್ವ ರಾಜಸ್ಥಾನ, ಕರಾವಳಿ ಕರ್ನಾಟಕ, ತಮಿಳುನಾಡು ಮತ್ತು ಲಕ್ಷದ್ವೀಪದ ಪ್ರತ್ಯೇಕ ಸ್ಥಳಗಳಿಗೆ ಹೆಚ್ಚಿನ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜಸ್ಥಾನದಲ್ಲಿ 40 ° C ಅಥವಾ ಅದಕ್ಕಿಂತ ಹೆಚ್ಚಿನ ತಾಪಮಾನ ಉಂಟಾಗುವ ಸಾಧ್ಯತೆ ಎಂದು ಅದು ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net