ಕೆಪಿಸಿಸಿಗೆ ಜಂಬೋಜೆಟ್​ ಪಡೆ ರೆಡಿ; ಹಿರಿಯರಿಗೆ, ವಲಸಿಗರಿಗೆ ಸಂಘಟನೆಯಲ್ಲಿ ಮಣೆ

KPCC
Published on

ಬೆಂಗಳೂರು: ಚುನಾವಣೆಗೆ ಮುನ್ನ ಪ್ರದೇಶ ಕಾಂಗ್ರೆಸ್​ ಸಮಿತಿಗೆ ಜಂಬೋಜೆಟ್​ ಪಡೆಯನ್ನು ರಚಿಸಿದ್ದು, ನಿಗಮ, ಮಂಡಳಿ ಅವಕಾಶ ವಂಚಿತರು, ಹಿರಿಯರು, ಹೊಸಬರಿಗೆ ಪಕ್ಷದ ಸಂಟನೆ ಜವಾಬ್ದಾರಿ ನೀಡಲಾಗಿದೆ.
ಡಿ.ಆರ್​. ಪಾಟೀಲ್​, ಅಕೈ ಪದ್ಮಶಾಲಿ, ಎಚ್​.ಆಂಜನೇಯ, ರಮಾನಾಥ ರೈ, ಕೆ.ಅಭಯ ಚಂದ್ರ, ಆರ್​.ವಿ. ವೆಂಕಟೇಶ್​, ಐವಾನ್​ ಡಿಸೋಜಾ, ಎ.ಆರ್​.ಎಂ ಹುಸೇನ್​, ಬಿ.ಶಿವರಾಂ, ಸೂರಜ್​ಹೆಗ್ಡೆ, ಬಿ.ಎಲ್​.ಶಂಕರ್​, ವಿ.ಎಸ್​.ಉಗ್ರಪ್ಪ, ವಿ.ಆರ್​.ಸುದರ್ಶನ್​, ಮೋಹನ್​ ಲಿಂಬಿಕಾಯಿ, ಆನಂದ ನ್ಯಾಮಗೌಡ ಸೇರಿ 43ಮಂದಿಗೆ ಉಪಾಧ್ಯಕ್ಷ ಸ್ಥಾನ ನೀಡಲಾಗಿದೆ.
ಅದೇ ರೀತಿ ವೀಣಾ ಕಾಶಪ್ಪನವರ್​, ಸೌಮ್ಯ ರೆಡ್ಡಿ, ರ್ಪೂಣಿಮಾ ಶ್ರೀನಿವಾಸ್​, ಬಸವನಗೌಡ ಬಾದಲಿರ್, ಅಮರಾವತಿ ಚಂದ್ರಶೇಖರ್​, ಎಂ.ರಾಮಚಂದ್ರಪ್ಪ, ಎಸ್​.ಮನೋಹರ್​, ವಿಜಯ್​ ಮುಳುಗುಂದ್​, ಶಂಕರ್​ ಗುಹಾ ದ್ವಾರಕಾನಾಥ್​, ಎಸ್​.ಎ ಹುಸೇನ್​, ಎಂ.ಎನ್​.ಗೋಪಾಲಕೃಷ್ಣ, ಶಿವರಾಂ, ವಿಜಯ್​ ಮತ್ತಿಕಟ್ಟಿ, ನಿಕೇತ್​ ರಾಜ್​ ಮೌರ್ಯ ಸೇರಿ 138 ಮಂದಿಗೆ ಪ್ರಧಾನ ಕಾರ್ಯದರ್ಶಿ ಜವಾಬ್ದಾರಿ ನೀಡಲಾಗಿದೆ.
ವಿನಯ್​ ಕಾರ್ತಿಕ್ ಖಜಾಂಚಿಯಾಗಿದ್ದು, ಮಾಧ್ಯಮ ವಿಭಾಗಕ್ಕೆ ರಮೇಶ್​ ಬಾಬು, ಐಶ್ವರ್ಯ ಮಹದೇವ್​, ಇ.ಸತ್ಯಪ್ರಕಾಶ್​ ಅವರನ್ನು ನೇಮಿಸಲಾಗಿದೆ. ಸಾಮಾಜಿಕ ಜಾಲತಾಣ ವಿಭಾಗಕ್ಕೆ ವಿಜಯ್​ ಮತ್ತಿಕಟ್ಟಿ, ನಿಕೇತ್​ ರಾಜ್​ ಮೌರ್ಯ ಸಹ ಅಧ್ಯಕ್ಷರಾಗಿರುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net