

ಬೆಂಗಳೂರು: ಪ್ರದೇಶ ಕಾಂಗ್ರೆಸ್ ಸಮಿತಿ ತನ್ನದೇ ಆದ ಟಿವಿಚಾನಲ್ (ಡಿಜಿಟಲ್) ಆರಂಭಿಸಲು ತಯಾರಿ ಮಾಡಿಕೊಂಡಿದ್ದು, ಮುಂದಿನ ವಾರ ಉದ್ಘಾಟನೆಗೊಳ್ಳಲಿದೆ. ಕೆಪಿಸಿಸಿಟಿವಿ ಹೆಸರಿನ ಯೂಟ್ಯೂಬ್ ಚಾನಲ್‌ಗಾಗಿ ಪಕ್ಷದ ಕಚೇರಿಯಲ್ಲಿ ಪ್ರತ್ಯೇಕ ಸ್ಟುಡಿಯೋ ಸಿದ್ಧಪಡಿಸಲಾಗಿದೆ. ಕಾಂಗ್ರೆಸ್‌ನ ಸಿದ್ಧಾಂತ ಪ್ರಚಾರ ಮಾಡುವುದು, ಸರ್ಕಾರ ಕಾರ್ಯಕ್ರಮದ ಪ್ರಚಾರ ಮಾಡುವ ಮೂಲಕ ಜನರನ್ನು ಮುಟ್ಟುವುದು ಈ ಪ್ರಯತ್ನದ ಉದ್ದೇಶ. ಸಚಿವರು, ಮುಖಂಡರ ಸಂದರ್ಶನಗಳು, ರಾಜ್ಯಾದ್ಯಂತ ನಾಯಕರ ಭಾಷಣಗಳ ಪ್ರಸಾರ, ಸಂವಾದ, ಚರ್ಚೆಗಳು ಈ ವೇದಿಕೆಯಲ್ಲಿ ಪ್ರಸಾರವಾಗಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್ ತಿಳಿಸಿದ್ದಾರೆ.