

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಹಿಂದೆ ಕಾಂಗ್ರೆಸ್ ಕೈವಾಡ ಇದೆ ಎಂಬ ಸಚಿವ ಎಸ್ಟಿ ಸೋಮಶೇಖರ ಹೇಳಿಕೆ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಪ್ಯಾಂಟ್ ಜಾರಿದ್ರೆ ಅವರ ಪ್ಯಾಂಟ್ನ್ನು ಅವರೇ ಹಾಕಿಕೊಳ್ಳಬೇಕು. ಮತ್ತೊಬ್ಬರು ಪ್ಯಾಂಟ್ ಹಾಕೋಕೆ ಆಗಲ್ಲ. ಪೊಲಿಟಿಕಲ್ ಗೇಮ್ನಲ್ಲಿ ಕೆಲವರು ಷಡ್ಯಂತ್ರ ಮಾಡುತ್ತಾರೆ. ಹುಶಾರಾಗಿರಬೇಕು. 25 ವರ್ಷ ಶಾಸಕರಾಗಿ, ಮೂರು ಬಾರಿ ಸಚಿವರಾಗಿರೋರು ದಡ್ಡರಾ? ಎಂದು ಪ್ರಶ್ನಿಸಿದ ಅವರು, ಸಿಡಿ ನಕಲಿಯೋ? ಅಸಲಿಯೋ? ಅನ್ನುವುದನ್ನು ಮಾಧ್ಯಮಗಳು ನಿರ್ಧರಿಸಲಿ, ಪಾಪ ರಮೇಶ್ ಜಾರಕಿಹೊಳಿ ನೊಂದಿದ್ದಾನೆ ಎಂದು ಹೇಳಿದ್ದಾರೆ.
ಎಸ್ಟಿ ಸೋಮಶೇಖರ್ ಅವರನ್ನು ನಾನು ಬಿಜೆಪಿಗಿಂತ ಚೆನ್ನಾಗಿ ಬಲ್ಲೇನು, ಸಿಡಿ ಹಿಂದೆ ಕಾಂಗ್ರೆಸ್ ಕೈವಾಡ ಇದ್ದರೇ ಏನೇನಿದೆಯೋ ಅದನ್ನು ಮಾಧ್ಯಮಗಳ ಮುಂದೆ ಅವರೇ ಹೇಳಲಿ. 20 ವರ್ಷಗಳಿಂದ ಅವರು ಕಾಂಗ್ರೆಸ್ನಲ್ಲಿದ್ದರಲ್ಲಾ? ಅವಾಗ ಏನೇನು ಆಗಿದೆಯೋ ಅದನ್ನೂ ಹೇಳಲಿ ಎಂದು ತಿರುಗೇಟು ನೀಡಿದರು.
ರಮೇಶ್ ಜಾರಕಿಹೊಳಿಯನ್ನು ನಾನು ಚೆನ್ನಾಗಿ ಬಲ್ಲೇನು. ಅವನು ನಾನು ಒಂದು ಕಾಲದಲ್ಲಿ ಚೆನ್ನಾಗಿ ಇದ್ದೇವು. ನಂತರ ನನ್ನ ಬಗ್ಗೆ ಹುಚ್ಚುಚ್ಚು ಆಗಿ ಹೇಳಿಕೆ ಕೊಟ್ಟ. ಅವತ್ತಿಂದ ಅವನ ಸ್ನೇಹವನ್ನು ನಾನು ಬಿಟ್ಟೆ ಎಂದು ಡಿಕೆಶಿ ಹೇಳಿದರು.