

ಬೆಂಗಳೂರು: ಡೇಟಾ ವಿಶ್ಲೇಷಣೆ ಕಾಪೋರೇಟ್ ಕಂಪನಿಗಳಲ್ಲಿ ಸಾಮಾನ್ಯ ಪ್ರಕ್ರಿಯೆ. ಅದೇ ಮಾದರಿಯಲ್ಲಿ ಪಕ್ಷದಲ್ಲೂ ಡೇಟಾ ವಿಶ್ಲೇಷಣೆಗೆ ಕಾಂಗ್ರೆಸ್ ಮುಂದಾಗಿದೆ. ಪಕ್ಷದ ಐಟಿ ಕೋಶದ ಮೂಲಕ ಡೇಟಾ ವಿಶ್ಲೇಷಣೆಗೆ ಒತ್ತು ನೀಡುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೂಚನೆ ನೀಡಿದ್ದಾರೆ.
ಪಕ್ಷದಿಂದ ಈಗಾಗಲೆ ಡಿಜಿಟಲ್ ಯೂತ್ ನೇಮಿಸುತ್ತಿದ್ದು, 58 ಸಾವಿರ ಬೂತ್ಗಳಿಂದಲೂ ನಿಖರ ಅಂಕಿ-ಅಂಶ ಸಂಗ್ರಹಿಸುವುದು, ವಿಶ್ಲೇಷಿಸುವುದು, ಪ್ರಮುಖವಾಗಿ ಜನಾಭಿಪ್ರಾಯ ಕಂಡುಕೊಂಡು ನಾಡಿಮಿಡಿತ ಅರಿಯುವ ಕೆಲಸವನ್ನು ಮಾಡುವ ಉದ್ದೇಶದಿಂದ ವಿಶ್ಲೇಷಣಾ ಚಟುವಟಿಕೆ ನಡೆಸಲಾಗುತ್ತದೆ.
ಈ ಬಗ್ಗೆ ‘ವಿಜಯವಾಣಿ’ಗೆ ವಿವರಣೆ ನೀಡಿದ ಕೆಪಿಸಿಸಿ ಮಾಹಿತಿ ತಂತ್ರಜ್ಞಾನ ಹಾಗೂ ಐಟಿ ಸೆಲ್ನ ಅಧ್ಯಕ್ಷ, ಶಾಸಕ ಪ್ರಿಯಾಂಕ್ ಖರ್ಗೆ, ಪಕ್ಷದ ಡಿಜಿಟಲ್ ಯೂತ್ ಅಥವಾ ಬೇರೆ ರೂಪದಲ್ಲಿ ಸಂಗ್ರಹವಾಗುವ ದತ್ತಾಂಶವನ್ನು ಕ್ರೋಡಿಕರಿಸಿ ಅದನ್ನು ಬೇರೆ ಬೇರೆ ರೀತಿಯಲ್ಲಿ ವಿಂಗಡಿಸಿ ಬಳಸಿಕೊಂಡರೆ ಪಕ್ಷಕ್ಕೆ ಅನುಕೂಲವಾಗುತ್ತದೆ. ಕಾರ್ಯಕ್ರಮ ಜಾರಿಗೂ ಸಹಾಯವಾಗುತ್ತದೆ. ತಿರ್ವನ ಕೈಗೊಳ್ಳಲು ಸುಲಭವಾಗುತ್ತದೆ ಎಂದು ವಿವರಿಸಿದರು.
ಇದನ್ನೂ ಓದಿ: ಸ್ಮಾರ್ಟ್ಫೋನ್ ಕಳೆದುಕೊಂಡವರ ತುರ್ತು ಗಮನಕ್ಕೆ…
ಪಕ್ಷದ ತೀರ್ವನದ ಬಗ್ಗೆ ಫೀಡ್ಬ್ಯಾಕ್ ಯಾವ ರೀತಿ ಇದೆ, ಕಾರ್ಯಕರ್ತರ ಅನಿಸಿಕೆ, ಅಭಿಪ್ರಾಯ ಕ್ರೋಡಿಕರಿಸಲು ಅನುಕೂಲವಾಗಲಿದೆ. ತಂತ್ರಜ್ಞಾನ ಬಳಸಿಕೊಂಡು ಜನರಿಗೆ ಹತ್ತಿರವಾಗಬಹುದು. ಈ ನಿಟ್ಟಿನಲ್ಲಿ ಪಕ್ಷದಿಂದ ಈ ತೀರ್ಮಾನ ಮಾಡಲಾಗಿದೆ ಎಂದರು.
ಕೆಪಿಸಿಸಿ ಅಧ್ಯಕ್ಷರು, ಶಾಸಕಾಂಗ ಪಕ್ಷದ ನಾಯಕರು, ವಿವಿಧ ಘಟಕಗಳ ಮುಖ್ಯಸ್ಥರಿಗೆ ನಮ್ಮ ಕೋಶ ಬೆನ್ನೆಲುಬಾಗಿ ಕೆಲಸ ಮಾಡಲಿದೆ. ಪಕ್ಷದ ಚಟುವಟಿಕೆ ಎಲ್ಲಿ ಕ್ರಿಯಾಶೀಲವಾಗಿದೆ, ಎಲ್ಲಿ ಚೇತರಿಸಿಕೊಳ್ಳಬೇಕು, ಚುನಾವಣೆಯಲ್ಲಿ ಅಭ್ಯರ್ಥಿ ಆಯ್ಕೆ ಮಾಡುವುದು ಸೇರಿ ಎಲ್ಲ ರೀತಿಯಲ್ಲೂ ಅಧ್ಯಯನ ಮಾಡಿ ತೀರ್ಮಾನ ಮಾಡಲು ನಮ್ಮ ಡೇಟಾ ವಿಶ್ಲೇಷಣೆ ನೆರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗ್ರಾಮೀಣ ಭಾಗದಲ್ಲಿ ಇಂಟರ್ನೆಟ್, ಸ್ಮಾರ್ಟ್ಫೋನ್ ಬಳಕೆ ಹೆಚ್ಚಾಗಿದೆ. ಇದನ್ನು ಬಳಸಿಕೊಂಡು ವೃತ್ತಿಪರವಾಗಿ ಡೇಟಾ ವಿಶ್ಲೇಷಣೆ ಚಟುವಟಿಕೆ ನಡೆಸಿ ಪಕ್ಷಕ್ಕೆ ಅನುಕೂಲ ಮಾಡಿಕೊಡಲಾಗುತ್ತದೆ. ಡೇಟಾ ಸಂಗ್ರಹಣೆ, ನಿರ್ವಹಣೆಗೆ ಮೊಬೈಲ್ ಅಪ್ಲಿಕೇಷನ್, ಸಾಫ್ಟ್ವೇರ್ ಬಳಸುತ್ತೇವೆ. | ಪ್ರಿಯಾಂಕ್ ಖರ್ಗೆ ಕೆಪಿಸಿಸಿ ಮಾಹಿತಿ ತಂತ್ರಜ್ಞಾನ ಹಾಗೂ ಐಟಿ ಸೆಲ್ನ ಅಧ್ಯಕ್ಷhttps://www.vijayavani.net/the-curious-case-of-a-belgian-woman-who-temporarily-thought-she-was-a-chicken/