ಕೊಟ್ಟೂರೇಶ್ವರ ಮಠದ ದಾನಮ್ಮದೇವಿ ದೀಪೋತ್ಸವ ಡಿ. 1ರಂದು

je721538035802367-abc
Published on

ರಾಣೆಬೆನ್ನೂರ: ಇಲ್ಲಿಯ ಕೊಟ್ಟೂರೇಶ್ವರ ನಗರದ ಶ್ರೀ ಕೊಟ್ಟೂರೇಶ್ವರ ಮಠದ ದಾನಮ್ಮದೇವಿಯ 9ನೇ ವರ್ಷದ ಜಾತ್ರಾ ಮಹೋತ್ಸವ ಮತ್ತು ಕಾತಿರ್ಕೋತ್ಸವ ಡಿ. 1ರಂದು ಜರುಗಲಿದೆ.

ಅಂದು ಬೆಳಗಿನ ಜಾವ 5.30ಕ್ಕೆ ದೇವಿಗೆ ರುದ್ರಾಭಿಷೇಕ, ಅಷ್ಟೋತ್ತರ, ಮಹಾ ಮಂಗಳಾರತಿ, ಬೆಳಗ್ಗೆ 10 ಗಂಟೆಗೆ ಉಡಿ ತುಂಬುವುದು, ಮಧ್ಯಾಹ್ನ ಪ್ರಸಾದ ವಿತರಣೆ ಹಾಗೂ ಸಂಜೆ 5ಕ್ಕೆ ಪಲ್ಲಕ್ಕಿ ಉತ್ಸವವು ನಡೆಯಲಿದೆ. ರಾತ್ರಿ 7.30ಕ್ಕೆ ಗುಡ್ಡದಾನ್ವೇರಿಯ ಶಿವಯೋಗಿ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಕಾತಿರ್ಕೋತ್ಸವ ಜರುಗಲಿದೆ ಎಂದು ದೇವಸ್ಥಾನ ಸಮಿತಿ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net