'ಕೋಟಿ ಕಂಠ ಗಾಯನ'ದಲ್ಲಿ ಭಾಗಿಯಾಯ್ತು ಕರ್ನಾಟಕ ಸಂಘ ಕತಾರ್

Qatar F
Published on

ಕತಾರ್: ರಾಜ್ಯೋತ್ಸವ ಪ್ರಯುಕ್ತ ಹಮ್ಮಿಕೊಳ್ಳಲಾಗಿರುವ ಕೋಟಿ ಕಂಠ ಗಾಯನದಲ್ಲಿ ಕತಾರ್ ಕನ್ನಡ ಸಂಘವೂ ಭಾಗಿಯಾಗಿದೆ. ಕತಾರ್‌ನಲ್ಲಿ ನೆಲೆಸಿರುವ ಆದಿವಾಸಿ ಕನ್ನಡಿಗರು ಹಾಗೂ ಕರ್ನಾಟಕ ಸಂಘವು 67ನೇ ರಾಜ್ಯೋತ್ಸವದ ಅಂಗವಾಗಿ ಕರ್ನಾಟಕ ರಾಜ್ಯ ಸರ್ಕಾರದ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಆಯೋಜಿಸಿದ 'ಕೋಟಿ ಕಂಠ ಗಾಯನ'ದಡಿ ೨೮ ಅ.28ರಂದು ಆಯೋಜಿಸಿದ "ನನ್ನ ನಾಡು ನನ್ನ ಹಾಡು" ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿತು.

ಜಯ ಭಾರತ ಜನನಿಯ ತನುಜಾತೆ, ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಬಾರಿಸು ಕನ್ನಡ ಡಿಂಡಿಮವ, ಹಚ್ಚೇವು ಕನ್ನಡದ ದೀಪ, ವಿಶ್ವವಿನೂತನ ವಿದ್ಯಾಕೇತನ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡುಗಳನ್ನು, ಕರ್ನಾಟಕ ಸಂಘ ಕತಾರ್‌ನ ಆಡಳಿತ ಮಂಡಳಿ ಸದಸ್ಯರು ಹಾಗೂ ಕರ್ನಾಟಕ ಸಂಘದ ಸದಸ್ಯರು ಕತಾರ್‌ನ ಕಾಲಮಾನದ 11 ಗಂಟೆಗೆ ಹಾಡಿದರು.

ಗಾಯನ ಕಾರ್ಯಕ್ರಮದಲ್ಲಿ ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷ ಹಾಗೂ ಕರ್ನಾಟಕ ಸಂಘದ ಮಾಜಿ ಉಪಾಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು, ಕರ್ನಾಟಕ ಸಂಘದ ಅಧ್ಯಕ್ಷ ಮಹೇಶ್ ಗೌಡ ಅವರು ಭಾಗವಹಿಸಿದರು. ಗಾಯನದಲ್ಲಿ ಭಾಗವಹಿಸಿದ ಎಲ್ಲ ಗಾಯಕರು ಹಾಗೂ ಸಂಘದ ಸದಸ್ಯರಿಗೆ ಮಹೇಶ್ ಗೌಡ ಧನ್ಯವಾದಗಳನ್ನು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net