ಸಚಿವ ಕೋಟಾ ಶ್ರೀನಿವಾಸ ಪೂಜಾರಿಗೆ ವಸತಿ ಶಾಲೆಗಳ ನೌಕರರ ಸಂಘದಿಂದ ಸನ್ಮಾನ

Kota Srinivas Pujaty
Published on

ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸಿದ್ದಕ್ಕೆ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ವಸತಿ ಶಾಲೆಗಳ ನೌಕರರ ಸಂಘ ನಿನ್ನೆ (ಫೆ.9) ಸನ್ಮಾನಿಸಿತು.

KREIS ವಸತಿ ಶಾಲೆಗಳ ಬಹುದಿನಗಳ ಬೇಡಿಕೆಗಳಾದ ಗಣಕೀಕೃತ ಕೌನ್ಸಿಲಿಂಗ್ ಮೂಲಕ ವರ್ಗಾವಣೆ, ವಿವಿಧ ವೃಂದಗಳ ನೌಕರರಿಗೆ ಮುಂಬಡ್ತಿ ಮತ್ತು ಎನ್​ಪಿಎಸ್​ (NPS) ಯೋಜನೆಯ ಸರ್ಕಾರದ ವಂತಿಗೆಯನ್ನು ಶೇ.14ಕ್ಕೆ ಏರಿಕೆ ಬೇಡಿಕೆಗಳನ್ನು ಈಡೇರಿಸಿದಕ್ಕಾಗಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಅರುಣ ಶಹಾಪುರ ಅವರ ಸಮ್ಮುಖದಲ್ಲಿ ವಸತಿ ಶಾಲೆಗಳ ನೌಕರರ ಸಂಘದಿಂದ (RSEA) ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ಗೌರವಪೂರ್ವಕವಾಗಿ ಅಭಿನಂದಿಸಲಾಯಿತು.

ವಸತಿ ಶಾಲೆಗಳ ನೌಕರರ ಸಂಘ ರಾಜ್ಯಾಧ್ಯಕ್ಷರಾದ ರವಿಚಂದ್ರ ಪಿ.ಎನ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾಗ ನಟರಾಜ್ ಪಿ.ಕೆ ಮತ್ತು ಪದಾಧಿಕಾರಿಗಳಿಂದ ಕೋಟಾ ಶ್ರೀನಿವಾಸ ಪೂಜಾರಿ ಅವರು ಸನ್ಮಾನವನ್ನು ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net