"ಸಮಾಜದಲ್ಲಿ ಸಮಾನತೆ ಎಂದಿಗೂ ಇರಬಾರದು" ಎಂಬಿಬಿಎಸ್ ವೈದ್ಯನ ಹೃದಯೀಸ್ಪರ್ಶಿ ವಿಡಿಯೋ ಎಲ್ಲೆಡೆ ವೈರಲ್​ ! MBBS

untitled-design-44-6902071173247
Published on

ರಾಜಸ್ಥಾನ: ಕೋಟಾದ ಸರ್ಕಾರಿ ಆಸ್ಪತ್ರೆಯ ಯುವ ಎಂಬಿಬಿಎಸ್​ (MBBS) ವೈದ್ಯರೊಬ್ಬರು ಮಹಿಳೆಯರು ಮಾಸಿಕ ಮುಟ್ಟಿನ ಸಮಸ್ಯೆಯಿಂದ ಹಿಡಿದು ಹೆರಿಗೆ ಸಮಯದವರೆಗೂ ಅನುಭವಿಸುವ ಸವಾಲುಗಳ ಕುರಿತು ಮಾಡಿದಂತಹ ಹೃದಯೀಸ್ಪರ್ಶಿ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ.

ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಾರ್ಡ್‌ನಲ್ಲಿ ಇಂಟರ್ನ್‌ಶಿಪ್ ಮಾಡುವಂತಹ ಸಮಯದಲ್ಲಿ ಹೆರಿಗೆಯ ಅನುಭವದಿಂದ ಇದು ಪ್ರೇರೇಪಿಸಲ್ಪಟ್ಟಿದೆ. ಮಹಿಳೆಯರು ಸವಲತ್ತುಗಳನ್ನು ಪಡೆಯುತ್ತಾರೆ. ಸಮಾಜದಲ್ಲಿ ಸಮಾನತೆ ಎಂದಿಗೂ ಇರಬಾರದು ಎಂದು ವಾದಿಸಿರುವ ಪೋಸ್ಟ್​ನ್ನು ಹಂಚಿಕೊಂಡಿದ್ದಾರೆ.

ಯುವ ವೈದ್ಯ ರಿತಿಕ್ ಮಹೇಶ್ವರಿ ಹಂಚಿಕೊಂಡಿರುವ ವಿಡಿಯೋದಲ್ಲಿ ಮಹಿಳೆಯರು ಎಷ್ಷು ನೋವುಗಳನ್ನು ಸಹಿಸಿಕೊಳ್ಳುತ್ತಾರೆ ಎಂಬುದನ್ನು ನಾನು ಅರಿತುಕೊಂಡಿದ್ದೇನೆ. ಒಬಿಜಿವೈಎನ್‌ನಲ್ಲಿ ನನ್ನ ಇಂಟರ್ನ್​ಶಿಪ್​ ಮಾಡಿದ ನಂತರ ಮಹಿಳೆಯರು ಸಮಾಜದಲ್ಲಿ ಹೆಚ್ಚು ಅರ್ಹರು ಎಂದು ನಾನು ಅರಿತುಕೊಂಡಿದ್ದೇನೆ ಎಂದರು.

ಪುರುಷರು ಎಂದಿಗೂ ಅನುಭವಿಸದ ದೈಹಿಕ ಮತ್ತು ಭಾವನಾತ್ಮಕ ಕಷ್ಟಗಳನ್ನು ಮಹಿಳೆಯರು ಯಾವಾಗಲೂ ಅನುಭವಿಸುತ್ತಾರೆ. ಇವರು ಮಾಸಿಕ ಮುಟ್ಟಿನಿಂದ ಪ್ರಾರಂಭವಾಗಿ ಹೆರಿಗೆಯ ಭಯಾನಕ ನೋವನ್ನು ನುಂಗಿ ಬದುಕುತ್ತಾರೆ. ಹೆರಿಗೆಯನ್ನು ಗಮನಿಸುವುದು ಅವರ ಆತ್ಮವನ್ನು ನಡುಗಿಸುವ ಅನುಭವ. ಮಹಿಳೆಯರ ಪರಿಶ್ರಮದ ಪ್ರಮಾಣವನ್ನು ನಾನು ಖಂಡಿತವಾಗಿಯೂ ಅರ್ಥಮಾಡಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.

ಹುಡುಗಿಯರು ಎಂದಿಗೂ ಸಂಪೂರ್ಣವಾಗಿ ಆರೋಗ್ಯವಾಗಿರಲು ಸಾಧ್ಯವಿಲ್ಲ. ಪುರುಷರು ಅಂತಹ ಮಾನಸಿಕ ಹಾಗೂ ದೈಹಿಕ ಯಾತನೆಗಳಿಲ್ಲದೇ ಬದುಕಲು ಅದೃಷ್ಟವಂತರು ಎಂದು ತಿಳಿಸಿದ್ದಾರೆ.

ಮಹಿಳೆಯರು ಜೈವಿಕ ನೋವನ್ನು ಮೀರಿ ತಮ್ಮದೇ ಆದ ನಿರ್ದಿಷ್ಟ ತೂಕವನ್ನು ಹೊಂದಿರುತ್ತಾರೆ. ಇನ್ನು ಸಂಬಂಧಕ್ಕೆ ಬಂದರೆ, ಗರ್ಭೀಣಿಯಾಗುವ ಭಯವು ಹುಡುಗಿಯರು ಮಾತ್ರ ಯೋಚಿಸುವಂತ ವಿಷಯ. ಗಂಡು ಮಕ್ಕಳು ಮೋಜು ಮಾಡುತ್ತಾರೆ ಎಂದು ತಿಳಿಸಿದರು.

ನೆಟ್ಟಿಗರ ಪ್ರತಿಕ್ರಿಯೆ ಏನು?

ಮಹಿಳೆಯರ ಹಕ್ಕುಗಳು ಮತ್ತು ಸಮಾನತೆಗಾಗಿ ನೀವು ಹೇಗೆ ನಿಲ್ಲುತ್ತೀರಿ ಎಂಬುದರ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಸ್ತ್ರೀವಾದವನ್ನು ಬಹಿರಂಗವಾಗಿ ಬೆಂಬಲಿಸುವ ಪುರುಷನಾಗಲು ಧೈರ್ಯ, ಸಹಾನುಭೂತಿ ಹಾಗೂ ನಿಜವಾದ ಶಕ್ತಿ ಬೇಕು. ನಿಮ್ಮಂತಹ ಧ್ವನಿಗಳು ವ್ಯತ್ಯಾಸವನ್ನುಂಟು ಮಾಡುತ್ತದೆ. ಇವು ಇತರರು ಯೋಚಿಸಲು, ಪ್ರತಿಬಿಂಬಿಸಲು ಮತ್ತು ಕಾರ್ಯನಿರ್ವಹಿಸಲು ಪ್ರೇರೇಪಿಸುತ್ತವೆ ಎಂದು ಒಬ್ಬ ಬಳಕೆದಾರರು ಕಮೆಂಟ್​ ಮಾಡಿದ್ದಾರೆ.

ಈ ಪೋಸ್ಟ್ ವೀಕ್ಷಿಸಿದ ನೆಟ್ಟಿಗರು ಪ್ರತಿಕ್ರಿಯಿಸಿದ್ದು, ಋತುಚಕ್ರವಿಲ್ಲ, ಗರ್ಭಧಾರಣೆಯಿಲ್ಲ, ಋತುಬಂಧವಿಲ್ಲ, ಹೋರಾಟಕ್ಕೆ ಕಾರಣವಾಗುವ ಹಾರ್ಮೋನುಗಳ ಬದಲಾವಣೆಗಳಿಲ್ಲ. ಪುರುಷನಾಗಿ ಜನಿಸುವುದು ನಿಜವಾದ ಸವಲತ್ತು" ಎಂದು ಕಮೆಂಟ್​ ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net