

ಮುಂಬೈ: ಸೌತ್ ಸಿನಿ ಇಂಡಸ್ಟ್ರಿಯ ಅಬ್ಬರದ ಮುಂದೆ ಮಂಕಾಗಿರುವ ಹಿಂದಿ ಚಿತ್ರರಂಗವು ಇತ್ತೀಚಿನ ವರ್ಷಗಳಲ್ಲಿ ನೀಡಿರುವುದು ಕೆಲವೇ ಕೆಲವು ಹಿಟ್ ಸಿನಿಮಾಗಳು ಎಂದು ಹೇಳಬಹುದಾಗಿದೆ. ಈ ಪೈಕಿ ಪಠಾಣ್, ಜವಾನ್ , ಗದರ್-2 ಸೇರಿದಂತೆ ಕೆಲವೇ ಕೆಲವು ಚಿತ್ರಗಳು ಹಿಟ್ಲಿಸ್ಟ್ ಸೇರಿದವು. ಇದೀಗ ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಹಿರಿಯ ನಟ ನಾಸೀರುದ್ಧಿನ್ ಷಾ ಬಾಲಿವುಡ್ ಚಿತ್ರಗಳಿಗಿಂತ ಕೊರಿಯನ್ ಸಿನಿಮಾಗಳು ಉತ್ತಮವಾಗಿವೆ ಎಂದು ಹೇಳಿದ್ದಾರೆ.
ಕಾರ್ಯಕ್ರಮ ಒಂದರಲ್ಲಿ ಈ ಕುರಿತು ಮಾತನಾಡಿದ ಷಾ, ಭಾರತೀಯ ಆಹಾರವು ಅದರ ವಸ್ತು ಮತ್ತು ಗುಣಮಟ್ಟವು ಜಾಗತಿಕ ಮಟ್ಟದಲ್ಇ ಮನ್ನಣೆ ಪಡೆಯುತ್ತಿರುವಾಗ ಬಾಲಿವುಡ್ ಚಲನಚಿತ್ರಗಳು ಮಾತ್ರ ಈ ಗುಣಲಕ್ಷಣಗಳನ್ನು ಹೊಂದಿಲ್ಲ. ಬಾಲಿವುಡ್ ಚಿತ್ರಗಳಲ್ಲಿ ನಿಜವಾದ ವಸ್ತುವಿನ ಕೊರತೆಯಿದ್ದು, ನೀರಿನ ಮೇಲೆ ಗುಳ್ಳೆಯಂತಾಗಿದೆ.
ಬಾಲಿವುಡ್ ಚಿತ್ರಗಳಿಗಿಂತ ಕೊರಿಯನ್ ಸಿನಿಮಾಗಳು ಉತ್ತಮವಾಗಿದೆ. ಇಡೀ ಜಗತ್ತು ಬಾಲಿವುಡ್ ಚಿತ್ರಗಳನ್ನು ನೋಡುತ್ತಿದೆ ಎಂದು ನಾವು ಹೇಳಿಕೊಳ್ಳುತ್ತೇವೆ. ಆದರೆ, ಅದಾಗುತ್ತಿಲ್ಲ. ಮೊದಲಿಗೆ ನಾನು ಬಾಲಿವುಡ್ ಎಂಬ ಪದವನ್ನು ದ್ವೇಷಿಸುತ್ತೇನೆ. ಏಕೆಂದರೆ ಈ ಚಿತ್ರಗಳು ಸತ್ವವನ್ನು ಹೊಂದಿರದ ಕಾರಣ ಎಲ್ಲರಿಗೂ ತಿಳಿದಿರುವ ಉದ್ದೇಶಗಳೊಂದಿಗೆ ನಿರ್ಮಿಲಸಲ್ಪಟ್ಟಿರುವುದರಿಂದ ಚಿತ್ರಗಳು ಸೋಲುವಂತಾಗಿದೆ ಎಂದು ನಟ ನಾಸೀರುದ್ಧೀನ್ ಷಾ ಅಭಿಪ್ರಾಯಪಟ್ಟಿದ್ದಾರೆ.