ಪ್ಯಾಕೇಜ್ ಟೆಂಡರ್ ನಿಲ್ಲಿಸಿ: ಕೊಪ್ಪಳದಲ್ಲಿ ಎಸ್ಸಿ, ಎಸ್ಟಿ ಸಿವಿಲ್ ಗುತ್ತಿಗೆದಾರರ ಸಂಘ ಪ್ರತಿಭಟನೆ

22112022 tavaragera formars protest
Published on

ಕೊಪ್ಪಳ: ಪ್ಯಾಕೇಜ್ ಟೆಂಡರ್ ನಿಲ್ಲಿಸುವಂತೆ ಒತ್ತಾಯಿಸಿ ಎಸ್ಸಿ, ಎಸ್ಟಿ ಸಿವಿಲ್ ಗುತ್ತಿಗೆದಾರರ ಸಂಘ ನಗರದ ಲೋಕೋಪಯೋಗಿ ಇಲಾಖೆ ಕಚೇರಿ ಎದುರು ಸೋಮವಾರ ಧರಣಿ ನಡೆಸಿತು.
ಟೆಂಡರ್ ಕಾಮಗಾರಿಗಳನ್ನು ಎಲ್-1 ಗುತ್ತಿಗೆದಾರರಿಗೆ ಬದಲಿಗೆ ಬೇಕಾದವರಿಗೆ ನೀಡುತ್ತಿರುವ ಇಲಾಖೆ ಇಇಗಳಾದ ರಾಜಶೇಖರ ಕಡಿವಾಲ, ಮಲ್ಲಿಕಾರ್ಜುನ ಹಾಗೂ ಜೆಇ ಸೋಮಶೇಖರರನ್ನು ಸೇವೆಯಿಂದ ಅಮಾನತುಗೊಳಿಸಬೇಕು.

ಗುತ್ತಿಗೆದಾರರ ಜತೆಗೆ ಸರಿಯಾಗಿ ನಡೆದುಕೊಳ್ಳಲ್ಲ. ಸರಿಯಾದ ಮಾಹಿತಿ ಕೊಡದೆ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿರುವ ಇಲಾಖೆ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಬೇಕು. ಇಲಾಖೆಯಲ್ಲಿ ಪ್ಯಾಕೇಜ್ ಟೆಂಡರ್ ಕರೆಯುವುದನ್ನು ನಿಲ್ಲಿಸಬೇಕು. ಕಾಮಗಾರಿಗಳ ಪ್ರಕಾರ ಟೆಂಡರ್ ಕರೆದರೆ ಎಸ್ಸಿ, ಎಸ್ಟಿ ಗುತ್ತಿಗೆದಾರರಿಗೆ ಮೀಸಲಾತಿ ನೀಡಿದಂತಾಗುತ್ತದೆ ಎಂದು ಒತ್ತಾಯಿಸಿದರು. ಸಂಘ ಜಿಲ್ಲಾಧ್ಯಕ್ಷ ಹನುಮೇಶ ಕಡೆಮನಿ, ತಾಲೂಕು ಅಧ್ಯಕ್ಷ ಬಸಪ್ಪ ಲಾಮಾಣಿ, ಗುತ್ತಿಗೆದಾರರಾದ ದ್ಯಾಮಣ್ಣ ಪೂಜಾರ, ಟಿ.ರತ್ನಾಕರ, ಮಾರುತಿ ಬಿಕನಹಳ್ಳಿ, ರಾಮಣ್ಣ ಚೌಡ್ಕಿ, ಕಮಲಸಾಬ್ ಒಂಟಿ, ಡಿ.ಕೆ.ಪರುಶುರಾಮ, ಬಸಪ್ಪ ಮ್ಯಾಗೇರಿ, ಫಜಲ್ ಸಾಬ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net