

ಕೊಳ್ಳೇಗಾಲ: ಪಟ್ಟಣದ ದೇವಾಂಗ ಪೇಟೆಯ ಶ್ರೀ ಚೌಡೇಶ್ವರಿ ಗುಡಿ ಬೀದಿ ನಿವಾಸಿ ಶ್ರೀ ಮಕ್ಕಳ ಮಹದೇಶ್ವರ ಸ್ವಾಮಿ ದೇ ವಾಲಯದ ಪ್ರಧಾನ ಅರ್ಚಕ ಪಿ.ಕೆ ಕುಮಾರಸ್ವಾಮಿ( 72 ) ಬುಧವಾರ ಹೃದಯಘಾತದಿಂದ ನಿಧನಗೊಂಡಿದ್ದಾರೆ. ಮೃತರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ. ಗುರುವಾರ ಮಧ್ಯಾಹ್ನ 12.30 ಕ್ಕೆ ಪಟ್ಟಣದಲ್ಲಿರುವ ದೇವಾಂಗ ಸಮಾಜದ ಸ್ಮಶಾ ನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.