ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆ ವಾರ್ಷಿಕೋತ್ಸವ

21-KGL PHOTO-2.
Published on

ಕೊಳ್ಳೇಗಾಲ: ಪಟ್ಟಣದ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆ ವಾರ್ಷಿಕೋತ್ಸವ ಭಾನುವಾರ ಆಯೋಜಿಸಲಾಗಿತ್ತು. ಶ್ರೀ ಚೌಡೇಶ್ವರಿ ಶಾಲೆ ಆವರಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಬಹಳ ವರ್ಷದಿಂದ ದೇವಾಂಗ ಸಮಾಜದ ಕುಲಸ್ಥರು ತಮ್ಮ ಶಿಕ್ಷಣ ಸಂಸ್ಥೆ ಮೂಲಕ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಎಂದರು.

ದೇವಾಂಗ ಮಹಾಜನ ಸಂಘದ ಅಧ್ಯಕ್ಷ ಕೆ.ವೇಣುಗೋಪಾಲ್, ಕಾರ್ಯದರ್ಶಿ ಎ.ಎನ್.ನಾಗರಾಜಯ್ಯ, ನಗರಸಭೆ ಸದಸ್ಯ ಎ.ಪಿ.ಶಂಕರ್, ಮನೋಹರ್, ಪವಿತ್ರಾ ರಮೇಶ್, ಮುಖಂಡ ಮಧುಚಂದ್ರ, ಮುಖ್ಯಶಿಕ್ಷಕರು, ಶಿಕ್ಷಕರು, ದೇವಾಂಗ ಮಹಾಜನ ಸಂಘದ ಪದಾಧಿಕಾರಿಗಳು ಇದ್ದರು.
ಶುಕ್ರವಾರ ಚೌಡೇಶ್ವರಿ ಶಾಲೆಯ ವಾರ್ಷಿಕೋತ್ಸವ ನಡೆಯಿತು. ಮಾಜಿ ಶಾಸಕ ಎನ್.ಮಹೇಶ್ ಹಾಗೂ ಬಿಇಒ ಮಂಜುಳಾ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net