ಸಿದ್ದಪ್ಪಾಜಿ ದೇವಸ್ಥಾನದ ಹುಂಡಿಯಲ್ಲಿ 12.92 ಲಕ್ಷ ರೂ. ಸಂಗ್ರಹ

23-KGL-5,
Published on

ಕೊಳ್ಳೇಗಾಲ: ಸುಪ್ರಸಿದ್ಧ ಶ್ರೀ ಕ್ಷೇತ್ರ ಚಿಕ್ಕಲ್ಲೂರು ಘನನೀಲಿ ಸಿದ್ದಪ್ಪಾಜಿ ದೇವಸ್ಥಾನದ ಹುಂಡಿ ಎಣಿಕೆ ಮಂಗಳವಾರ ನಡೆದಿದ್ದು, 12,92,426 ಲಕ್ಷ ರೂ. ಹಣ ಸಂಗ್ರಹವಾಗಿದೆ.

ಚಿಕ್ಕಲ್ಲೂರಿನ ಹಳೇ ಮಠದಲ್ಲಿ ತಹಸೀಲ್ದಾರ್ ಮಂಜುಳಾ ನೇತೃತ್ವದಲ್ಲಿ ಕಳೆದ ಮೂರು ತಿಂಗಳ ಬಳಿಕ ದೇವಾಲಯಕ್ಕೆ ಸಂಬಂಧಿಸಿದ 6 ಹುಂಡಿ ಎಣಿಕೆ ನಡೆದಿದೆ. ಜ.25ರಿಂದ 5 ದಿನಗಳ ಕಾಲ ನಡೆಯುವ ಜಾತ್ರೆ ಹಿನ್ನೆಲೆಯಲ್ಲಿ ಹುಂಡಿಯಲ್ಲಿ ಸಂಗ್ರಹವಾದ ಹಣವನ್ನು ಶ್ರೀ ಸಿದ್ದಪ್ಪಾಜಿ ದೇವಸ್ಥಾನದ ಟ್ರಸ್ಟ್ ಹೆಸರಿನಲ್ಲಿ ಕೊಳ್ಳೇಗಾಲದ ಎಸ್‌ಬಿಐ ನಲ್ಲಿ ಜಮಾ ಮಾಡಲಾಗಿದೆ. ಎಣಿಕೆ ಸಂದರ್ಭ ಉಪತಹಸೀಲ್ದಾರ್ ವಿಜಯಕುಮಾರ್, ರಾಜಸ್ವ ನಿರೀಕ್ಷಕ ರಂಗಸ್ವಾಮಿ, ಗ್ರಾಮಲೆಕ್ಕಿಗ ಶಾಂತರಾಜು, ರಾಕೇಶ್, ಪ್ರಸಾದ್, ಪ್ರದೀಪ್, ತೆಳ್ಳನೂರು ಹಾಗೂ ಕೊತ್ತನೂರು ಪಂಚಾಯಿತಿ ಗ್ರಾಮ ಸಹಾಯಕರು ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net