ಯುವಕರು ಸಂಘಟಿತರಾಗಿ ಸಮಾಜಮುಖಿ ಕಾರ್ಯ ಮಾಡಿ

25kglphoto-3.......
Published on

ಕೊಳ್ಳೇಗಾಲ: ಪಟ್ಟಣದ ಅಮ್ಮನ್ ಕಾಲನಿ ಬಡಾವಣೆಯಲ್ಲಿ ಭಾನುವಾರ ನೂತನವಾಗಿ ಸ್ಥಾಪಿಸಲಾದ ಜೈ ಭೀಮ್ ಯುವಕರ ಸಂಘಕ್ಕೆ ಚಾಲನೆ ದೊರೆಯಿತು.

ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಹಾರ ಹಾಕಿ, ಸಂಘದ ನೂತನ ಸಂಘದ ನಾಮಫಲಕವನ್ನು ಅನಾವರಣ ಮಾಡುವ ಮೂಲಕ ನಗರಸಭೆ ಸದಸ್ಯ ರಾಘವೇಂದ್ರ ಸಂಘಕ್ಕೆ ಚಾಲನೆ ನೀಡಿದರು. ಡಾ.ಬಿ.ಆರ್. ಅಂಬೇಡ್ಕರ್ ಶಿಕ್ಷಣ, ಸಂಘಟನೆ, ಹೋರಾಟದ ಮಹತ್ವ ಏನು ಎಂಬುದನ್ನು ಇಡೀ ಪ್ರಪಂಚಕ್ಕೆ ತಿಳಿಸಿದ್ದಾರೆ. ಅಂತೆಯೆ ಸಂಘಟನಾ ದೃಷ್ಟಿಯಿಂದ ಪೌರಕಾರ್ಮಿಕರ ಕಾಲನಿಯಲ್ಲಿ ಇಲ್ಲಿನ ಯುವಕರು ಅಂಬೇಡ್ಕರ್ ಅವರ ಹೆಸರಲ್ಲಿ ಸಂಘ ಪ್ರಾರಂಭಿಸಿರುವುದು ಸಂತೋಷದ ವಿಚಾರವಾಗಿದೆ. ಸಂಘದಲ್ಲಿ ಯಾವುದೇ ಲೋಪ, ದೋಷಗಳು ಆಗದಂತೆ ಪ್ರತಿಯೊಬ್ಬರೂ ಸಂಘಟಿತರಾಗಿ ಸಮಾಜಮುಖಿ ಕಾರ್ಯಗಳನ್ನು ಮಾಡಬೇಕು. ಎಲ್ಲರೂ ಒಗ್ಗೂಡಿ ಸಂಘವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಬೇಕು. ಬಡಾವಣೆಯ ಅಭಿವೃದ್ಧಿಗಾಗಿ ಹೋರಾಟ ನಡೆಸಬೇಕು ಎಂದು ಹೇಳಿದರು.

ಈ ವೇಳೆ ಜೈ ಭೀಮ್ ಯುವಕರ ಸಂಘ ನೂತನ ಅಧ್ಯಕ್ಷ ಪ್ರಸನ್ನ, ಉಪಾಧ್ಯಕ್ಷ ಪ್ರತಾಪ್, ಕಾರ್ಯದರ್ಶಿ ಹರೀಶ್‌ಕುಮಾರ್, ಖಜಾಂಜಿ ಯುವನ್ ಭರತ್ ಹಾಗೂ ಇತರ ಸದಸ್ಯರನ್ನು ಅಭಿನಂದಿಸಲಾಯಿತು. ನಗರಸಭೆ ಮಾಜಿ ಸದಸ್ಯ ಕಂದಸ್ವಾಮಿ, ಬಡಾವಣೆ ಯಜಮಾನರಾದ ರಾಜೇಂದ್ರ, ಬಣ್ಣಾರಿ, ಪಿ. ಶಿವಕುಮಾರ್, ಪಿ.ಮೂರ್ತಿ, ಸಫಾಯಿ ಕರ್ಮಚಾರಿ ಅಧ್ಯಕ್ಷ ನಾಗರಾಜು, ರಾಜ್ಯ ಕಾರ್ಯದರ್ಶಿ ರಮೇಶ್, ತ್ಯಾಗರಾಜು, ರಮಾಬಾಯಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net