ಸೀಟು ವಿವಾದ: ಪ್ರಯಾಣಿಕರ ಮೇಲೆ ಪೆಪ್ಪರ್​ ಸ್ಪ್ರೇ ಸಿಂಪಡಿಸಿದ ಮಹಿಳೆ! ವಿಡಿಯೋ ವೈರಲ್ Pepper spray ​

untitled-design-2025-10-11t121800414-68e9fdaed70dc
Published on

Pepper spray : ಮಹಿಳೆಯೊಬ್ಬರು ರೈಲಿನಲ್ಲಿ ಸೀಟು ಸಿಗದ ಕಾರಣ ಪೆಪ್ಪರ್​ ಸ್ಪ್ರೇ ಬಳಸಿ ಇತರ ಪ್ರಯಾಣಿಕರನ್ನು ಬೆದರಿಸಿದ ಘಟನೆ ಕೊಲ್ಕತ್ತಾದ ಸೀಲ್ಡಾ ರೈಲು ನಿಲ್ದಾಣದಲ್ಲಿ ನಡೆದಿದೆ.

ಅಮೃತ ಸರ್ಕಾರ್​ ಎಂಬ ಇನ್​ಸ್ಟಾಗ್ರಾಮ್​ ಬಳಕೆದಾರರು ಹಂಚಿಕೊಂಡಿರುವ ವಿಡಿಯೋದಲ್ಲಿ ಮಹಿಳೆ ಅನುಭವಿಸಿದ ಅಪಾಯಕಾರಿ ಸಂದರ್ಭವನ್ನು ವಿವರಿಸಿದ್ದಾರೆ. ಹಸಿರು ಕುರ್ತಿ ಧರಿಸಿದ ಮಹಿಳೆಯೊಬ್ಬಳು ರೈಲಿನಲ್ಲಿರುವ ಆಸನ ವ್ಯವಸ್ಥೆ ಕುರಿತು ಇನ್ನೊಬ್ಬ ಪ್ರಯಾಣಿಕನೊಂದಿಗೆ ವಾಗ್ವಾದ ನಡೆಸಿರುವುದರ ಬಗ್ಗೆ ತಿಳಿಸಿದ್ದಾಳೆ.

ಮಹಿಳೆಯು ಸೀಟು ಸಿಗದ ಕಾರಣ ಬ್ಯಾಗ್​ನಲ್ಲಿದ್ದ ಪೆಪ್ಪರ್​ ಸ್ಪ್ರೇ ಡಬ್ಬಿಯನ್ನು ಹೊರತೆಗೆದು ಪ್ರಯಾಣಿಕರ ಮುಖಕ್ಕೆ ಸಿಂಪಡಿಸಲು ಮುಂದಾಗಿದ್ದಾಳೆ. ಈ ವೇಳೆ ಮತ್ತೊಬ್ಬ ಮಹಿಳೆ ಮಧ್ಯಪ್ರವೇಶಿಸಲು ಮುಂದಾದಾಗ ಆಕೆ ರೈಲು ವಿಭಾಗದಾದ್ಯಂತ ಪೆಪ್ಪರ್​ ಸ್ಪ್ರೇ ಸಿಂಪಡಿಸಿದ್ದಾಳೆ ಎಂದು ಹೇಳಿದ್ದಾಳೆ.

ಈ ವೇಳೆ ರೈಲಿನಲ್ಲಿದ್ದ ಇತರ ಪ್ರಯಾಣಿಕರು ಕೆಮ್ಮಲು ಪ್ರಾರಂಭಿಸಿದ್ದು, ಗಂಟಲು ಮತ್ತು ಮೂಗು ಉರಿಯಲು ಪ್ರಾರಂಭಿಸಿದವು. ಹಾಗೆಯೇ ಆಕೆಯ ಇಬ್ಬರು ಮಕ್ಕಳು ಅಸ್ವಸ್ಥರಾದರು ಎಂದು ಪೋಸ್ಟ್​ನಲ್ಲಿ ತಿಳಿಸಿದ್ದಾಳೆ.

ಈ ವಿಡಿಯೋದಲ್ಲಿ ಪ್ರಯಾಣಿಕರು ಆಕೆಯನ್ನು ಮೇಲಕ್ಕೆ ಎಳೆದುಕೊಂಡು ಹೋಗುವುದನ್ನುತೋರಿಸಲಾಗಿದ್ದು, ಮಹಿಳೆಯು ಇತರ ಪ್ರಯಾಣಿಕರಿಗೆ ಕ್ಷಮೆಯಾಚಿಸಲು ಮುಂದಾಗಿದ್ದಾಳೆ. ಆದರೂ ಆಕೆಯ ಕ್ಷಮೆಯನ್ನು ನಿರಾಕರಿಸಿದ ಪ್ರಯಾಣಿಕರು ಆಕೆಯನ್ನು ಹಿಡಿದು ರೈಲ್ವೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ಅಮೃತಾ ಸರ್ಕಾರ್ ಈ ಮಹಿಳೆಯ ಬಗ್ಗೆ ತೀವ್ರವಾಗಿ ಟೀಕೆ ವ್ಯಕ್ತಪಡಿಸಿದ್ದು, ನಿಜವಾಗಿಯೂ ಅಪಾಯದಲ್ಲಿದ್ದಾಗ ಮಾತ್ರ ಆತ್ಮರಕ್ಷಣೆಗಾಗಿ ಪೆಪ್ಪರ್ ಸ್ಪ್ರೇ ಬಳಸಬೇಕು. ಆದರೆ ಈ ಮಹಿಳೆಯು ತನ್ನ ಮಿತಿ ಮೀರಿದ್ದಾಳೆ. ಸಂಪೂರ್ಣವಾಗಿ ಕ್ರಿಮಿನಲ್​ ಆಗಿ ಕಾಣಿಸಿಕೊಂಡಿದ್ದಾಳೆ. ಹಾಗೆಯೇ ಯಾವುದೇ ತಪ್ಪಿತಸ್ಥ ಭಾವನೆಯನ್ನು ತೋರಿಸಲಿಲ್ಲ ಎಂದು ಬರೆದು ಪೋಸ್ಟ್ ಮಾಡಿದ್ದಾಳೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net