ನಟಿ ರಶ್ಮಿಕಾ ನಿಶ್ಚಿತಾರ್ಥ ಸುದ್ದಿ: ಉಂಗುರದ ಮೊದಲ ಚಿತ್ರ ವೈರಲ್! Rashmika Mandanna

untitled-design-2025-10-11t112500292-68e9f14c13871
Published on

Rashmika Mandanna: ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್​ ದೇವರಕೊಂಡ ಹೈದ್ರಬಾದ್​ನಲ್ಲಿ ತಮ್ಮ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡಿದ ಬೆನ್ನಲ್ಲೇˌ ನಿನ್ನೆ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೋ ಹಂಚಿಕೊಂಡಿರುವ ನಟಿಯ ಉಂಗುರದ ಮೊದಲ ಚಿತ್ರ ಸದ್ಯ ಭಾರೀ ಸದ್ದು ಮಾಡುತ್ತಿದೆ.

ವಿಡಿಯೋದಲ್ಲಿ ರಶ್ಮಿಕಾ ಆಕೆಯ ಪ್ರೀಯಿ ಔರಾನೊಂದಿಗೆ ಮಾತನಾಡುತ್ತಾ, ಚಿತ್ರೀಕರಣದ ಸಮಯದಲ್ಲಿ ನಾನು ಕೇಳಿದ ಮೊದಲ ಹಾಡು ಇದು. ನಾನು ಇನ್ನೂ ಈ ಹಾಡನ್ನು ಪ್ರೀತಿಸುತ್ತಿದ್ದೇನೆ. ಪರದೆಯ ಮೇಲಿನ ಹುಡುಗಿ ನಾನೇ ಎಂದು ಔರಗೆ ತಿಳಿಸುತ್ತಿದ್ದಾಳೆ. ಹಾಗೇ ನಾನು ನಿನ್ನೊಂದಿಗೆ ಈ ಹಾಡನ್ನು ಹಾಡಬೇಕು ಎಂದು ಬಯಸುತ್ತೇನೆ ಎಂದು ವಿಡಿಯೋ ಮೂಲಕ ತಿಳಿಸಿದ್ದಾಳೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬೇಗನೆ ವೈರಲ್​ ಆಗಿದ್ದು, ಉಂಗುರವನ್ನು ನೋಡಿದ ನೆಟ್ಟಿಗರು ನಟಿ ಅಧಿಕೃತವಾಗಿ ನಿಶ್ಚಿತಾರ್ಥವನ್ನು ಬಹಿರಂಗಪಡಿಸಿದ್ದಾರೆ ಎಂದು ಕಮೆಂಟ್​ ಮಾಡಿದ್ದಾರೆ.

ವಿಜಯ್​ ಹಾಗೂ ರಶ್ಮಿಕಾ ಅಕ್ಟೋಬರ್ 3 ರಂದು ಕುಟುಂಬ ಸದಸ್ಯರು ಹಗೂ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮ ನೆರವೇರಿಸಿಕೊಂಡಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ. ನಿಶ್ಚಿತಾರ್ಥದ ನಂತರ, ವಿಜಯ್​ ಮೊದಲ ಬಾರಿಗೆ ಸಾರ್ವಜನಿಕವಾಗಿ ನಿಶ್ಚಿತಾರ್ಥದ ಉಂಗುರದೊಂದಿಗೆ ಕಾಣಿಸಿಕೊಂಡಿದ್ದಾರೆ. ಫೆಬ್ರವರಿ 2026 ರಲ್ಲಿ ಮದುವೆಯಾಗಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

ಈ ಹಿಂದೆ ಗೀತ ಗೋವಿಂದಂ ಹಾಗೂ ಡಿಯರ್​ ಕಾಮ್ರಾಡ್​ ಇ ಸಿನಿಮಾದಲ್ಲಿ ಇವರಿಬ್ಬರು ಒಟ್ಟಿಗೆ ಅಭಿನಯಿಸಿದ್ದು, ಈ ವೇಳೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದು ಎಲ್ಲೆಡೆ ವದಂತಿ ಹಬ್ಬಿತ್ತು. ಈ ನಿಶ್ಚಿತಾರ್ಥದ ಮಾಡಿಕೊಂಡ ನಂತರ ವದಂತಿಗಳಿಗೆ ಫುಲ್​ಸ್ಟಾಪ್​ ಇಟ್ಟಿದ್ದಾರೆ.

ಏತನ್ಮಧ್ಯೆ, ರಶ್ಮಿಕಾ ಅವರ ಮುಂದಿನ ಸಿನಿಮಾ' ತಮ್ಮ' ಬಿಡುಗಡೆಗೆ ಸಜ್ಜಾಗುತ್ತಿದ್ದು, ಇದರಲ್ಲಿ ಆಯುಷ್ಮಾನ್ ಖುರಾನಾ, ಪರೇಶ್ ರಾವಲ್ ಮತ್ತು ನವಾಜುದ್ದೀನ್ ಸಿದ್ದಿಕಿ ಅವರೊಂದಿಗೆ ನಟಿಸಿರುವ ಹಾರರ್ ಹಾಸ್ಯ ಚಲನಚಿತ್ರವಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net