VIVIDLIPIಯಿಂದ ವೈಶಿಷ್ಟ್ಯಪೂರ್ಣ ಸ್ಪರ್ಧೆಗಳೊಂದಿಗೆ 10 ವರ್ಷಗಳ ದಶಮಾನೋತ್ಸವ ಸಂಭ್ರಮ

WhatsApp Image 2025-10-11 at 10.51.02 AM
Published on

ಬೆಂಗಳೂರು: ಕನ್ನಡ ಸಾಹಿತ್ಯ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಕಳೆದ ಹತ್ತು ವರ್ಷಗಳಿಂದ ವಿಶಿಷ್ಟ ಸೇವೆ ಸಲ್ಲಿಸುತ್ತಿರುವ VIVIDLIPI ಸಂಸ್ಥೆಯು ತನ್ನ 10ನೇ ವಾರ್ಷಿಕೋತ್ಸವದ ಅಂಗವಾಗಿ ಕರ್ನಾಟಕದಾದ್ಯಂತದ ಲೇಖಕರು, ಕಥೆಗಾರರು ಮತ್ತು ಕಲಾವಿದರಿಗಾಗಿ ಮೂರು ವಿಶಿಷ್ಟ ಸೃಜನಶೀಲ ಸ್ಪರ್ಧೆಗಳನ್ನು ಆಯೋಜಿಸಿದೆ.

ಕಳೆದ ಒಂದು ದಶಕದಲ್ಲಿ, VIVIDLIPI ಯು ಕನ್ನಡ ಪುಸ್ತಕಗಳು, ಇ-ಪುಸ್ತಕಗಳು, ಆಡಿಯೊ ಬುಕ್‌ಗಳು, ಪಾಡ್‌ಕಾಸ್ಟ್‌ಗಳು, ಬ್ಲಾಗ್‌ಗಳು ಮತ್ತು ಯೂಟ್ಯೂಬ್ ಮೂಲಕ ಪ್ರಪಂಚದಾದ್ಯಂತ ಲಕ್ಷಾಂತರ ಸಾಹಿತ್ಯಾಸಕ್ತರನ್ನು ತಲುಪಿದೆ. ಈ ದಶಮಾನೋತ್ಸವ ಸಂಭ್ರಮಾಚರಣೆಯಲ್ಲಿ ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.

ಆಯೋಜಿಸಲಾದ ಸ್ಪರ್ಧೆಗಳು ಮತ್ತು ಬಹುಮಾನದ ವಿವರಗಳು:

ಬಹುಮಾನ ಪಡೆದ ಕಥೆಗಳನ್ನು VIVIDLIPI ಬ್ಲಾಗ್‌ನಲ್ಲಿ ಪ್ರಕಟಿಸಲಾಗುವುದು ಮತ್ತು ಆಯ್ದ ಕೃತಿಗಳನ್ನು ಆಡಿಯೊಬುಕ್‌ಗಳಾಗಿ ಹಾಗೂ ಪುಸ್ತಕವಾಗಿಯೂ ಪ್ರಕಟಿಸಲಾಗುವುದು.

ಪ್ರಥಮ ಬಹುಮಾನ ₹2500, ದ್ವಿತೀಯ ₹1500, ತೃತೀಯ ₹1000 ಮತ್ತು 3 ಸಮಾಧಾನಕರ ಬಹುಮಾನಗಳು.

ಸಣ್ಣ ಕಥೆಗಳನ್ನು ಗರಿಷ್ಠ 3000 ಪದಗಳು ಮೀರದಂತೆ ಬರೆದು ಕಳುಹಿಸಬಹುದು.

1. ಕಥಾಸಂಭ್ರಮಸಣ್ಣಕಥಾ ಸ್ಪರ್ಧೆ

ವಿಜೇತ ವಿಡಿಯೋಗಳನ್ನು VIVIDLIPI ಯ ಡಿಜಿಟಲ್ ವೇದಿಕೆಗಳಲ್ಲಿ ಪ್ರದರ್ಶಿಸಲಾಗುವುದು.

ಪ್ರಥಮ ಬಹುಮಾನ ₹3000, ದ್ವಿತೀಯ ₹2000, ತೃತೀಯ ₹1000.

ಕಥೆಗಳು, ಸಂಸ್ಕೃತಿ, ನೃತ್ಯ, ಹಾಸ್ಯ, ಕಲೆ, ಪರಿಸರ, ಅಥವಾ ನಿಮ್ಮಿಷ್ಟದ ಯಾವುದೇ ಪ್ರಕಾರಗಳಲ್ಲಿ 8 ನಿಮಿಷಗಳನ್ನು ಮೀರದ ವಿಡಿಯೋಗಳನ್ನು ರೆಕಾರ್ಡ್ ಮಾಡಿ ಕಳುಹಿಸಬಹುದು.

2. ರೀಲ್ ದುನಿಯಾ – ಕಿರು ವಿಡಿಯೋ ಸ್ಪರ್ಧೆ

ವಿಜೇತ ಆಡಿಯೋಗಳನ್ನು VIVIDLIPI ಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು.

ಪ್ರಥಮ ಬಹುಮಾನ ₹3000, ದ್ವಿತೀಯ ₹2000, ತೃತೀಯ ₹1000.

ಕಥೆ ಹೇಳುವುದು, ಇತಿಹಾಸ, ಸಂಸ್ಕೃತಿ, ಹಾಸ್ಯ, ಕಲೆ ಹೀಗೆ ಯಾವುದೇ ವಿಷಯಗಳ ಕುರಿತು 15 ರಿಂದ 30 ನಿಮಿಷಗಳ ವಿಷಯವನ್ನು ಪಾಡ್ಕಾಸ್ಟ್ ರೆಕಾರ್ಡ್ ಮಾಡಿ WAV/MP3 ಸ್ವರೂಪದಲ್ಲಿ ಸಲ್ಲಿಸಿ.

3. ಪಾಡ್‌ಕಾಸ್ಟ್ ಮೇನಿಯಾ – ಆಡಿಯೋ ಪಾಡ್‌ಕಾಸ್ಟ್ ಸ್ಪರ್ಧೆ

ಸಲ್ಲಿಸಲು ಕೊನೆಯ ದಿನಾಂಕ: ಅಕ್ಟೋಬರ್ 31, 2025

"ಇದು ಕೇವಲ VIVIDLIPI ಯ 10 ವರ್ಷಗಳ ಸಂಭ್ರಮದ ಆಚರಣೆ ಮಾತ್ರವಲ್ಲದೆ, ಕನ್ನಡ ಸಾಹಿತ್ಯ ಮತ್ತು ಮಾಧ್ಯಮದಲ್ಲಿ ಹೊಸ ಧ್ವನಿಗಳನ್ನು ಅನ್ವೇಷಿಸಲು ಮತ್ತು ಪ್ರೋತ್ಸಾಹಿಸಲು ಒಂದು ಅಪೂರ್ವ ವೇದಿಕೆಯನ್ನು ಒದಗಿಸುವ ಉತ್ಸವವಾಗಿದೆ," ಎಂದು VIVIDLIPI ತಂಡವು ಈ ಸಂದರ್ಭದಲ್ಲಿ ತಿಳಿಸಿದೆ.

ಹೆಚ್ಚಿನ ವಿವರಗಳಿಗಾಗಿ, ಆಸಕ್ತರು vividlipi.com ಗೆ ಭೇಟಿ ನೀಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net