ಕೋಲ್ಕತ್ತಾ ಅತ್ಯಾಚಾರ ಪ್ರಕರಣ; ಆರೋಪಿ ಮನೋಜಿತ್​ ಮಿಶ್ರಾ ವಿರುದ್ಧ ಮತ್ತೊಂದು ಅತ್ಯಾಚಾರ ಆರೋಪ! | Rape Case

dk - 2025-07-01T174106.943
Published on

Rape Case: ಕೋಲ್ಕತ್ತಾ ಸಾಮೂಹಿಕ ಅತ್ಯಾಚಾರದ ಪ್ರಮುಖ ಆರೋಪಿ ಮನೋಜಿತ್​ ಮಿಶ್ರಾ ವಿರುದ್ಧ ಮತ್ತೊಬ್ಬ ವಿದ್ಯಾರ್ಥಿನಿ ಅತ್ಯಾಚಾರದ ಆರೋಪ ಮಾಡಿದ್ದಾಳೆ.

ಇಂಡಿಯಾ ಟುಡೇ ಸಂಭಾಷಣೆ ವೇಳೆ ಮಾತನಾಡಿದ ಸಂತ್ರಸ್ತ ವಿದ್ಯಾರ್ಥಿನಿ, '' ಕಾಲೇಜು ಪ್ರವಾಸದ ಸಮಯದಲ್ಲಿ ಮನೋಜಿತ್ ಮಿಶ್ರಾ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಹೇಳಿಕೊಂಡಿದ್ದಾಳೆ. ಅಷ್ಟೇ ಅಲ್ಲ, ಆಕೆ ಪ್ರತಿಭಟಿಸಿದಾಗ, ಆಕೆಯನ್ನು ಹೊಡೆದು, ಅನುಚಿತವಾಗಿ ವರ್ತಿಸಿ ಕೊಲೆ ಬೆದರಿಕೆ ಹಾಕಿದ್ದಾನೆ'' ಎಂದು ಗಂಭೀರವಾಗಿ ಆರೋಪಿಸಿದ್ದಾಳೆ.

ಎರಡುವರೆ ವರ್ಷದ ಹಿಂದೆ ಪ್ರವಾಸದ ಸಂದರ್ಭದಲ್ಲಿ ಘಟನೆ ನಡೆದಿದೆ ಎಂದು ಹೇಳಿದ ಸಂತ್ರಸ್ತೆ ವಿದ್ಯಾರ್ಥಿನಿ, ಆ ಸಮಯದಲ್ಲಿ ಮನೋಜಿತ್ ಮಿಶ್ರಾ ಕೂಡ ಅವರೊಂದಿಗೆ ಹೋಗಿದ್ದ. ಅಲ್ಲಿ ಅವನು ಆಕೆಗೆ ಕಿರುಕುಳ ನೀಡಲು ಪ್ರಾರಂಭಿಸಿದನು. ಸಂತ್ರಸ್ತೆ ತನ್ನ ಕೃತ್ಯಕ್ಕೆ ಪ್ರತಿಭಟಿಸಿದಾಗ, ಆಕೆಗೆ ಹೊಡೆದಲ್ಲದೆ ಆಕೆಯ ಪಾಲಕರಿಗೆ ಕೊಲ್ಲುವುದಾಗಿ ಬೆದರಿಕೆ ಹಾಕಿದನು. ಸುಮ್ಮನಿರುವಂತೆ ಸಂತ್ರಸ್ತೆಗೆ ಎಚ್ಚರಿಕೆ ನೀಡಿದನು. ಪೊಲೀಸರ ಬಳಿ ಹೋಗಲು ಬಯಸಿದ್ದೆ, ಆದರೆ ಮನೋಜಿತ್ ಮಿಶ್ರಾ ಅವರ ರಾಜಕೀಯ ಪ್ರಭಾವದಿಂದಾಗಿ ಸುಮ್ಮನಿರಬೇಕಾಯಿತು ಎಂದು ವಿದ್ಯಾರ್ಥಿನಿ ಹೇಳಿಕೊಂಡಿದ್ದಾಳೆ.

15 ಜನ ಸಂತ್ರಸ್ತೆಯರಿದ್ದಾರೆ..

ನಾನೊಬ್ಬಳೆ ಅಲ್ಲ 15 ವಿದ್ಯಾರ್ಥಿನಿಯರ ಮೇಲೆ ಮನೋಜಿತ್​ ಮಿಶ್ರಾ ದೌರ್ಜನ್ಯ ಎಸಗಿದ್ದಾನೆ. ಅವರೆಲ್ಲಾ ಭಯದಿಂದ ಇತನ ವಿರುದ್ಧ ದೂರು ನೀಡಿಲ್ಲ. ಅಲ್ಲದೆ, ಕಾಲೇಜಿನಲ್ಲಿ ಇತ ಎಲ್ಲರನ್ನು ಭಯಭೀತಿಯಲ್ಲಿಟ್ಟಿದ್ದಾನೆ. ಪ್ರಶ್ನೆ ಎತ್ತಿದ್ರೆ ಕೊಲೆ ಬೆದರಿಕೆ ಹಾಕುತ್ತಿದ್ದ ಎಂದು ಆರೋಪಿಸಿದ್ದಾಳೆ ಎಂದು ವರದಿಯಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net