ಕೋಲ್ಕತದಲ್ಲಿ ಲಾಕ್​ಡೌನ್​ ಉಲ್ಲಂಘಿಸಿ ಮನೆಯಿಂದ ಹೊರಬಂದ 980 ಮಂದಿ ಬಂಧನ

Lockdown Arrest
Published on

ಕೋಲ್ಕತ್ತ: ದೇಶದೆಲ್ಲೆಡೆ ಲಾಕ್‌ಡೌನ್‌ ಆದೇಶ ಜಾರಿಯಾದರೂ ಜನರ ಓಡಾಟ ಮಾತ್ರ ನಿಂತಿಲ್ಲ. ಕರೊನಾ ವೈರಸ್‌ ಹರಡುವಿಕೆ ಕುರಿತಂತೆ ಎಷ್ಟೇ ಘೋಷಣೆ ಕೂಗಿದರೂ ಕೆಲವರು ಇದನ್ನು ಕಿವಿಯ ಮೇಲೆ ಹಾಕಿಕೊಳ್ಳುತ್ತಲೇ ಇಲ್ಲ. ಬೇರೆ ದಾರಿ ಕಾಣದ ಕೋಲ್ಕತ್ತ ಪೊಲೀಸರು ‘ದಂಡಂ ದಶ ಗುಣಂ’ ಎಂಬಂತೆ ಲಾಕ್‌ಔಟ್‌ ನಿಯಮ ಉಲ್ಲಂಘಿಸಿ ವಿನಾಕಾರಣ ತಿರುಗಾಟ ನಡೆಸುವವರನ್ನು ಬಂಧಿಸುವ ಕ್ರಮಕ್ಕೆ ಮುಂದಾಗಿದೆ.

ನಿನ್ನೆ ಒಂದೇ ದಿನಕ್ಕೆ 980 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಅವರ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಚೆಕಿಂಗ್‌ ಪೋಸ್ಟ್‌ ಬಳಿ ಹಾಗೂ ರಸ್ತೆಯ ಮೇಲೆ ಗಸ್ತು ತಿರುಗುತ್ತಿದ್ದ ಪೊಲೀಸರ ಕೈಗೆ ಇವರೆಲ್ಲಾ ಸಿಕ್ಕಿ ಬಿದ್ದಿದ್ದಾರೆ.

ಇವರ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಅಡಿ ಕೇಸು ದಾಖಲು ಮಾಡಿಕೊಳ್ಳಲಾಗುವುದು ಎಂದು ಪೊಲೀಸ್‌ ಇಲಾಖೆ ಹೇಳಿದೆ. ‘ಬರಿ ಮಾತಿನಿಂದ ಹೇಳಿದರೆ ಜನರಿಗೆ ಹೇಳಿದರೆ ಬುದ್ಧಿ ಬರುವುದಿಲ್ಲ ಎಂಬ ಕಾರಣಕ್ಕೆ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆದೇಶ ಹೊರಡಿಸಲಾಗಿದೆ’ ಎಂದು ಕೋಲ್ಪತ್ತ ಪೊಲೀಸ್‌ ಆಯುಕ್ತ ಅನುಜ್‌ ಶರ್ಮಾ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net