

ಕೋಲಾರ: ಕರೊನಾ ಪರೀಕ್ಷೆ ಮಾಡಿಸುವ ಸಲುವಾಗಿ ನಿಂತಿದ್ದ ಜನರು ತಮ್ಮ ತಮ್ಮಲ್ಲೇ ಗುದ್ದಾಟ ಮಾಡಿಕೊಂಡಿರುವ ಘಟನೆ ಕೋಲಾರದ ಜಿಲ್ಲಾಸ್ಪತ್ರೆಯ ಬಳಿ ನಡೆದಿದೆ. ಕ್ಯೂ ಬಿಟ್ಟು ವ್ಯಕ್ತಿಯೊಬ್ಬ ಮುಂದೆ ಹೋದ ಕಾರಣಕ್ಕೆ ಈ ಮಾರಾಮಾರಿ ನಡೆದಿದೆ.
ಕೋವಿಡ್ ಪರೀಕ್ಷೆ ಮಾಡಿಸಲು ಒಂದಿಷ್ಟು ಜನರು ಜಿಲ್ಲಾಸ್ಪತ್ರೆಯ ಕೋವಿಡ್ ಪರೀಕ್ಷಾ ಕೇಂದ್ರದ ಬಳಿ ಸಾಲುಗಟ್ಟಿ ನಿಂತಿದ್ದರು. ಈ ವೇಳೆ ವ್ಯಕ್ತಿಯೊಬ್ಬ ಸಾಲು ಬಿಟ್ಟು ಮುಂದೆ ಹೋಗಿ ಪರೀಕ್ಷೆ ಮಾಡಿಸಲು ಪ್ರಯತ್ನಿಸಿದ್ದಾನೆ. ಅದೇ ಕಾರಣಕ್ಕೆ ಮೊದಲು ಮಾತಿನ ಚಕಮಕಿ ನಡೆದಿದೆ. ಅದಾದ ನಂತರ ಕ್ಯೂನಲ್ಲಿ ನಿಂತವರು ಒಬ್ಬರ ಮೇಲೆ ಒಬ್ಬರು ಹಲ್ಲೆ ಮಾಡಲಾರಂಭಿಸಿದ್ದಾರೆ. ಈ ಮಾರಾಮಾರಿಯ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.