

ಜಯಪುರ: ಕೊಗ್ರೆಯ ಬಾಳೆಕೊಂಡ ಎಸ್ಟೇಟ್‌ನಲ್ಲಿ ನಾನು ಮತ್ತು ಗುಂಡ-2 ಚಲನಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ನಟ ಸಾಧುಕೋಕಿಲ, ಅವಿನಾಶ್, ಮಂಜು ಪಾವಗಡ, ವಿನೋದ್ ಗೊಬ್ಬರಗಾಲ ಸೇರಿದಂತೆ ಅನೇಕ ನಟ, ನಟಿಯರು ಭಾಗವಹಿಸಿದ್ದರು.
ನಿರ್ದೇಶಕ ರಘು ಹಾಸನ್ ನಿರ್ದೇಶನದ ಈ ಚಿತ್ರದಲ್ಲಿ ಸ್ಥಳೀಯ ಕಲಾವಿದರಾದ ಪ್ರದೀಪ್ ಹೆಬ್ಬಾರ್, ತುಪ್ಪೂರು ಮಂಜುನಾಥ್ ಅಭಿನಯಿಸಿದ್ದಾರೆ. ಬೆಂಗಳೂರು ಸೇರಿದಂತೆ ಮಲೆನಾಡಿನ ಆಗುಂಬೆ, ತೀರ್ಥಹಳ್ಳಿ, ಕೊಗ್ರೆ, ಬಾಳೆಹೊನ್ನೂರು, ಚಿಕ್ಕಮಗಳೂರು ಹಾಗೂ ಊಟಿಯಲ್ಲಿ ಚಿತ್ರೀಕರಣ ನಡೆಯಲಿದೆ. ನಾಯಕನಾಗಿ ರಾಕೇಶ್ ಅಡಿಗ, ನಾಯಕಿಯಾಗಿ ರಚನಾ ಇಂದರ್, ಕ್ಯಾಮೆರಾಮೆನ್ ಆಗಿ ತನ್ವಿಕ್, ಪ್ರೊಡಕ್ಷನ್ ಮುಖ್ಯಸ್ಥರಾಗಿ ರಾಮ್ ಸುಧೀರ್, ವಿ.ನಾಗೇಂದ್ರ ಪ್ರಸಾದ್, ರೋಹಿತ್ ರಾಮನ್, ಆರ್.ಪಿ. ಪಟ್ಟಾಯಕ್ ಸಂಗೀತ, ಸ್ಟಿಲ್ ಪೋಟೋಗ್ರಾರ್ ರಾಕೇಶ್ ಗೌಡ ಇದ್ದಾರೆ. ಚಿತ್ರ 5 ಭಾಷೆಗಳಲ್ಲಿ ಸಿದ್ದಗೊಳ್ಳುತ್ತಿದ್ದು, ನವಂಬರ್ ಅಥವಾ ಡಿಸೆಂಬರ್ ತಿಂಗಳಿನಲ್ಲಿ ಬಿಡುಗಡೆ ಮಾಡಲಾಗುವುದು ಎಂದು ನಿರ್ದೇಶಕ ರಘುಹಾಸನ್ ತಿಳಿಸಿದರು.