ಕೊಡವ ಸಂಸ್ಕೃತಿ ಅಧ್ಯಯನಕ್ಕೆ ಕಾರ್ಯ ಯೋಜನೆ

Kodava academy
Published on

ಬೆಂಗಳೂರು: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯು ‘ಕೊಡವ ಸಂಸ್ಕೃತಿ ಹಾಗೂ ಚರಿತ್ರೆಗಳ ಸಂಶೋಧನೆ - ಅಧ್ಯಯನ’ ಕ್ಕೆ ಮುಂದಾಗಿದ್ದು, ಸಂಶೋಧನೆಗೆ ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.

ಕೊಡವ ಭಾಷೆ-ಸಾಹಿತ್ಯ, ಸಂಸ್ಕೃತಿ, ಆಚಾರ-ವಿಚಾರ, ಪದ್ಧತಿ-ಪರಂಪರೆಗಳ ಹಾಗೂ ಕೊಡವ-ಕೊಡಗಿನ ಸಂಬಂಧಿತ ಚರಿತ್ರೆಗಳ ಬಗ್ಗೆ ಆಳವಾದ ಸಂಶೋಧನೆಗೆ ಅಕಾಡೆಮಿಯು ಕಾರ್ಯಯೋಜನೆ ರೂಪಿಸಿದೆ.

ವಿವರಗಳಿಗೆ: ಅಧ್ಯಕ್ಷರು, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಜೂನಿಯರ್ ಕಾಲೇಜು ರಸ್ತೆ, ಸ್ಕೌಟ್ಸ್ ಮತ್ತು ಗೈಡ್ಸ್ ಭವನ, ಮ್ಯಾನ್ಸ್ ಕಾಪೌಂಡ್ ಹತ್ತಿರ, ಮಡಿಕೇರಿ ಇವರಿಗೆ ಪತ್ರ ಬರೆದು ಮಾಹಿತಿ ಪಡೆದುಕೊಳ್ಳುವಂತೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net