ಎಸ್.ಎಂ. ಕೃಷ್ಣ ಸಂಪುಟದಲ್ಲಿ ಸಚಿವರಾಗಿದ್ದ ಟಿ. ಜಾನ್ ವಿಧಿವಶ​

T John
Published on

ಕೊಡಗು: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮಾಜಿ ಸಚಿವ ಟಿ.ಜಾನ್​ ಅವರು ಬೆಂಗಳೂರಿನಲ್ಲಿಂದ ಕೊನೆಯುಸಿರೆಳೆದರು. ಜಾನ್​ ಅವರಿಗೆ 92 ವರ್ಷ ವಯಸ್ಸಾಗಿತ್ತು.

ಜಾನ್​ ಅವರು ಎಸ್.ಎಂ.ಕೃಷ್ಣ ಅವರ ಸಂಪುಟದಲ್ಲಿ ಸಚಿವರಾಗಿದ್ದರು. ಮೂಲಸೌಕರ್ಯ ಮತ್ತು ನಾಗರಿಕ ವಿಮಾನಯಾನದ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಸಾಮಾಜಿಕ ಸೇವೆಗಳಲ್ಲೂ ಗುರುತಿಸಿಕೊಂಡಿದ್ದರು.

ಕೇರಳದಿಂದ ಕೊಡಗು ಜಿಲ್ಲೆಗೆ ಆಗಮಿಸಿ ಉತ್ತಮ ಹೆಸರು ಮಾಡಿದ್ದರು. ಅಬಕಾರಿ ಉದ್ಯಮ, ಶಿಕ್ಷಣ ಸಂಸ್ಥೆ, ರೆಸಾರ್ಟ್​ಗಳನ್ನು ಆರಂಭಿಸುವ‌ ಮೂಲಕ ಉದ್ಯಮಿಯು ಆಗಿದ್ದರು.

ಜಾನ್​ ಅವರ ಅಂತ್ಯಕ್ರಿಯೆ ನಾಳೆ ಬೆಂಗಳೂರಿನಲ್ಲಿ ನೆರವೇರಲಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net