

ಕೊಡಗು: ಇಬ್ಬರು ಪತ್ನಿಯರ ಜಗಳ ಒಬ್ಬಳ ಕೊಲೆಯಲ್ಲಿ ಅಂತ್ಯವಾದ ಘಟನೆ ಕೊಡಗು ಜಿಲ್ಲೆಯ ನೆಲ್ಲಿಹುದಿಕೇರಿಯಲ್ಲಿ ಶನಿವಾರ ನಡೆದಿದೆ.
ಜಾರ್ಖಂಡ್ ರಾಜ್ಯದವರಾದ ದಯಾನಂದ್ ಅವರ ಮೊದಲನೇ ಪತ್ನಿ ಆಶೀಖಾಗುಪ್ತ ಮತ್ತು ಎರಡನೇ ಪತ್ನಿ ವಸಿಖಾದೇವಿ(26) ಕಳೆದ ನಾಲ್ಕು ವರ್ಷಗಳಿಂದ ನೆಲ್ಲಿಹುದಿಕೇರಿ ಸಮೀಪದ ಬಳಂಜಿಗೆರೆ ಟಾಟಾ ಕಾಫೀ ತೋಟದಲ್ಲಿ ಮೂವರು ಮಕ್ಕಳೊಂದಿಗೆ ಒಂದೇ ಮನೆಯಲ್ಲಿ ವಾಸವಾಗಿದ್ದರು.
ಶನಿವಾರ ಸಂಜೆ ತೋಟದಿಂದ ಕೆಲಸ ಮುಗಿಸಿ ಮನೆಗೆ ಬಂದ ಇಬ್ಬರು ಪತ್ನಿಯರ ನಡುವೆ ಜಗಳ ಏರ್ಪಟ್ಟು ಮೊದಲ ಪತ್ನಿಯು ಕತ್ತಿಯಿಂದ ವಸಿಖಾ ದೇವಿಯ ಕುತ್ತಿಗೆ ಭಾಗಕ್ಕೆ ಕಡಿದು ಕೊಲೆಗೈದಿದ್ದಾಳೆ. ಕುಸಿದು ಬಿದ್ದ ವಸೀಖಾದೇವಿಯನ್ನು ಸಿದ್ದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.
ಈ ಸಂಬಂಧ ಸಿದ್ದಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತಿ ದಯಾನಂದನ ವಿಚಾರಣೆ ನಡೆಸುತ್ತಿದ್ದು. ಕೊಲೆಗೈದ ಆಸಿಖಾಗುಪ್ತ ತಲೆಮರೆಸಿಕೊಂಡಿದ್ದಾಳೆ. (ದಿಗ್ವಿಜಯ ನ್ಯೂಸ್)