ಕೊಡಗು ಮೂಲದ ಯೋಧ ಪುಣೆಯಲ್ಲಿ ಅನುಮಾನಾಸ್ಪದ ಸಾವು: ಸ್ಥಳಕ್ಕೆ ಪಾಲಕರನ್ನು ಕರೆಸಿದ ಪೊಲೀಸರು

KODAGU
Published on

ಮಡಿಕೇರಿ: ಪುಣೆಯ ವಸತಿಗೃಹದಲ್ಲಿ ಕೊಡಗಿನ ಯೋಧನೊಬ್ಬ ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ವೀರಾಜಪೇಟೆ ತಾಲೂಕಿನ ಮುಗುಟಗೇರಿ ನಿವಾಸಿ ರತನ್ ಬೋಪಣ್ಣ (22) ಮೃತ ಯೋಧ.

ನೇಣು ಬಿಗಿದ ಸ್ಥಿತಿಯಲ್ಲಿರುವ ಮೃತದೇಹ ದೊರೆತಿದ್ದು, ನಾಲ್ಕು ದಿನದ ಹಿಂದೆ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಘಟನೆ ನಡೆದ ಸ್ಥಳಕ್ಕೆ ಯೋಧ ರತನ್​ ಬೋಪಣ್ಣ ಅವರ ಪಾಲಕರನ್ನು ಅಲ್ಲಿನ ಪೊಲೀಸರು ಕರೆಸಿಕೊಂಡಿದ್ದಾರೆ.

2019ರ ಏಪ್ರಿಲ್ ತಿಂಗಳಲ್ಲಿ ಸೇನೆಗೆ ಸೇರ್ಪಡೆಯಾಗಿದ್ದ ಯೋಧ ರತನ್​ ಬೋಪಣ್ಣ, ಕಳೆದ ನವೆಂವರ್ ತಿಂಗಳಲ್ಲಿ ಮನೆಗೆ ಬಂದು ಹೋಗಿದ್ದರು. ಮಧ್ಯಪ್ರದೇಶದ ಜಬಲ್​ಪುರದಲ್ಲಿ ರತನ್​ ಬೋಪಣ್ಣ ಕರ್ತವ್ಯದಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net