

ಇದನ್ನೂ ಓದಿ: ಪಂಜಾಬ್ ಕಿಂಗ್ಸ್ ಮಾಲೀಕರ ಜಟಾಪಟಿ! ಕೋರ್ಟ್ ಮೊರೆ ಹೋದ ನಟಿ ಪ್ರೀತಿ ಜಿಂಟಾ
ಈ ಬಿಸ್ಕತ್ ಸವಿಯದವರೇ ಇಲ್ಲ ಬಿಡಿ. ಅಷ್ಟು ಫೇಮಸ್ ಈ ಪಾರ್ಲೆ-ಜಿ. ಇಂದಿಗೂ ಈ ಬಿಸ್ಕತ್ಗೆ ಎಲ್ಲಿಲ್ಲದ ಬೇಡಿಕೆ ಎಂದರೆ ನಂಬ್ತೀರಾ? ಖಂಡಿತ ನಂಬಲೇಬೇಕು. ಯಾಕಂದ್ರೆ ಅಷ್ಟರ ಮಟ್ಟಿಗೆ ಬೆಳೆದು ನಿಂತಿದೆ ಇದರ ಮಾರುಕಟ್ಟೆ. ಕೇವಲ ಭಾರತ ಮಾತ್ರವಲ್ಲದೇ ಜಾಗತಿಕ ಮಟ್ಟದಲ್ಲಿ ಪಾರ್ಲೆ-ಜಿ ತನ್ನ ವ್ಯವಹಾರವನ್ನು ವಿಸ್ತರಿಸಿಕೊಂಡಿದೆ. ಹಳ್ಳಿಯಿಂದ ಹಿಡಿದು ನಗರದ ನಿವಾಸಿಗಳ ಮನೆಗಳಲ್ಲಿ ಈ ಪಾರ್ಲೆ-ಜಿ ಬಿಸ್ಕತ್ ಇರುವುದು ಕಂಡುಬಂದಿದೆ. ಕೆಲವರ ದಿನಚರಿಯಲ್ಲಿ ಟೀ ಎಷ್ಟು ಮುಖ್ಯವೋ, ಟೀ ಜತೆಗೆ ಈ ಬಿಸ್ಕತ್ ಇರುವುದು ಕೂಡ ಅಷ್ಟೇ ಮುಖ್ಯ.
ಭಾರತದಲ್ಲಿ 2ರೂ.ನಿಂದ 5, 10, 50ರೂ. ಪ್ಯಾಕೆಟ್ನಲ್ಲಿ ಲಭಿಸುವ ಪಾರ್ಲೆ-ಜಿ ಬಿಸ್ಕತ್, ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಸಿಗುತ್ತದೆ. ಆದರೆ, ಇದೇ ಬಿಸ್ಕತ್ ಹೊರದೇಶಗಳಾದ ಅಮೆರಿಕಾ, ಪಾಕಿಸ್ತಾನಗಳಲ್ಲಿ ಎಷ್ಟರ ರೂ.ಗೆ ಸಿಗುತ್ತಿದೆ? ಭಾರತಕ್ಕಿಂತ ದುಬಾರಿ ಹಣಕ್ಕೆ ಮಾರಾಟವಾಗುತ್ತಿದೆಯೋ ಅಥವಾ ಇನ್ನೂ ಕಡಿಮೆ ದರದಲ್ಲಿ ಲಭಿಸುತ್ತಿದೆಯೋ ಎಂಬುದರ ಮಾಹಿತಿ ಈ ಕೆಳಕಂಡಂತಿದೆ ಗಮನಿಸಿ.
ಇದನ್ನೂ ಓದಿ: ಅಹ್ಹಾ.. ಪ್ರತಿನಿತ್ಯ ದಾಸವಾಳದ ಹೂವಿನ ಟೀ ಸೇವಿಸಿದರೆ ಆಗುವ ಜಾದೂ ಏನು ಗೊತ್ತಾ?
ಭಾರತದಲ್ಲಿ 65 ಗ್ರಾಂ ಪಾರ್ಲೆ-ಜಿ ಬಿಸ್ಕತ್ ಪ್ಯಾಕೆಟ್ಗೆ ಐದು ರೂ. ನಿಗದಿಪಡಿಸಲಾಗಿದೆ. ಆದರೆ, ಇದೇ ಬಿಸ್ಕತ್ ಅಮೆರಿಕಾ ದೇಶದಲ್ಲಿ 1 ಡಾಲರ್ಗೆ 56.5 ಗ್ರಾಂ. ಇರುವ 8 ಪ್ಯಾಕೆಟ್ ಬಿಸ್ಕತ್ ಲಭಿಸುತ್ತದೆ ಎಂದು ವರದಿ ತಿಳಿಸುತ್ತದೆ. ಅಂದರೆ, ಒಂದು ಪ್ಯಾಕೆಟ್ಗೆ 10 ರೂ. ಎಂದು ಹೇಳಲಾಗಿದೆ. ಇದೇ ಪಾಕಿಸ್ತಾನದಲ್ಲಿ ಎಷ್ಟಿದೆ ಎಂದು ನೋಡುವುದಾದರೆ, 79 ಗ್ರಾಂ. ಪಾರ್ಲೆ-ಜಿ ಬಿಸ್ಕತ್ಗೆ 20 ರೂ. ದರವಿದೆ. ಇದನ್ನೆಲ್ಲಾ ಗಮನಿಸಿ ಹೇಳುವುದಾದರೆ, ನಮ್ಮ ದೇಶಕ್ಕಿಂತ ಹೊರರಾಷ್ಟ್ರಗಳಲ್ಲಿಯೇ ಈ ಬಿಸ್ಕತ್ ಬೆಲೆ ದುಬಾರಿ ಇದೆ ಎಂಬುದು ಈ ವರದಿಯಿಂದ ಸ್ಪಷ್ಟವಾಗಿದೆ,(ಏಜೆನ್ಸೀಸ್).
https://www.vijayavani.net/gurucharan-singh-says-he-has-1-2-crore-loan